ಮುಂಬೈ: ಬುಧವಾರ ಸಿಂಧ್ ಸಮುದಾಯದಂತೆ ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಸಪ್ತಪದಿ ತುಳಿದಿದ್ದಾರೆ. ಇಂದು ಕೊಂಕಣಿ ಸಂಪ್ರದಾಯದಂತೆ ಮತ್ತೊಮ್ಮೆ ಈ ಜೋಡಿ ಮದುವೆ ಆಗಿದ್ದಾರೆ. ಆದರೆ ಇದೂವರೆಗು ನವದಂಪತಿಯ ಫೋಟೋಗಳು ಮಾತ್ರ ಹೊರಬಂದಿರಲಿಲ್ಲ. ಇದೀಗ ದೀಪಿಕಾ ಮದುವೆ ಫೋಟೋಗಳನ್ನು ಟ್ವಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.
ಎರಡು ಫೋಟೋಗಳನ್ನು ದೀಪಿಕಾ ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಎರಡು ಸಂಪ್ರದಾಯದಂತೆ ಮದುವೆ ನಡೆದಿದ್ದರಿಂದ ಅದೇ ರೀತಿಯಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಪಂಜಾಬಿ ಶೈಲಿಯಲ್ಲಿ ಜೋಡಿ ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚಿದ್ರೆ, ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಶ್ವೇತ ವರ್ಣದ ಉಡುಪಿನಲ್ಲಿ ಕಾಣಿಸಿದ್ದರೆ, ದೀಪಿಕಾ ಗೋಲ್ಡನ್ ಕಲರ್ ಸೀರೆಯಲ್ಲಿ ಕಾಣುತ್ತಿದ್ದಾರೆ.
ಇಟಲಿಯ ಕೋಮೊ ಸಿಟಿಯಲ್ಲಿ ಮದುವೆ ಸಿದ್ಧತೆ ಮಾಡಿಕೊಂಡಿದ್ದ ಜೋಡಿ ಸೆಕ್ಯೂರಿಟಿಗಾಗಿ ಬರೋಬ್ಬರಿ 1 ಕೋಟಿ ರೂ. ಪಾವತಿಸಿದ್ದಾರೆ. ಮದುವೆಗೆ ಎರಡು ಕುಟುಂಬಗಳ ಆಪ್ತರು ಸೇರಿದಂತೆ ಹಲವು ಬಾಲಿವುಡ್ ತಾರೆಗಳು ಭಾಗಿಯಾಗಿದ್ದಾರೆ. ಮದುವೆ ಬರುವ ಅತಿಥಿಗಳಿಗೆ ಮೊಬೈಲ್ ತರಕೂಡದು ಎಂದು ಡೀಪ್‍ವೀರ್ ಹೇಳಿದ್ದರಂತೆ. ಅದ್ಯಾಗೊ ಕೆಲವರು ಮೊಬೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳೊಲು ಮುಂದಾದಗ ಸೆಕ್ಯೂರಿಟಿ ಅವರನ್ನು ತಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
https://twitter.com/deepikapadukone/status/1063079371748057089
— Ranveer Singh (@RanveerOfficial) November 15, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews