ಬೀಜಿಂಗ್: ಚೀನಾದ (China) ಸ್ಟಾರ್ಟಪ್ ಕಂಪನಿ ಡೀಪ್‌ಸೀಕ್ (Deepseek) ಮೊದಲ ದಿನವೇ ಕೃತಕ ಬುದ್ಧಿಮತ್ತೆ ರಂಗದಲ್ಲಿ ಸಂಚಲನ ಮೂಡಿಸಿತ್ತು. ಅಮೆರಿಕ ಷೇರುಪೇಟೆ ಶೇಕ್ ಆಗಿತ್ತು. 51 ಕೋಟಿ ವೆಚ್ಚದಲ್ಲಿ ತಯಾರಾದ ಡೀಪ್‌ಸೀಕ್, ಎನ್‌ವಿಡಿಯಾ ಕಂಪನಿಗೆ ಒಂದೇ ದಿನದಲ್ಲಿ ಬರೋಬ್ಬರಿ 51 ಲಕ್ಷ ಕೋಟಿ ರೂ. ನಷ್ಟ ತಂದೊಡ್ಡಿದೆ.
ಈ ಬೆನ್ನಲ್ಲೇ, ಡೀಪ್‌ಸೀಕ್ ಮೇಲೆ ತೀವ್ರ ಸ್ವರೂಪದ ಸೈಬರ್ ದಾಳಿ ನಡೆದಿದೆ. ಇದರಿಂದ ಹೊಸ ಯೂಸರ್‌ಗಳಿಗೆ ನೋಂದಣಿ ಮಾಡಿಕೊಳ್ಳಲು ಆಗ್ತಿಲ್ಲ ಎಂದು ಡೀಪ್‌ಸೀಕ್ ತಿಳಿಸಿದೆ. ಇದನ್ನೂ ಓದಿ: ಫೆಬ್ರವರಿಗೆ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ಕೊಡ್ತಾರೆ: ಟ್ರಂಪ್
ಡೀಪ್‌ಸೀಕ್ ಸಂಸ್ಥೆ ಇತ್ತೀಚಿಗೆ ಆರ್1 ಹೆಸರಲ್ಲಿ ಎಐ ಮಾಡೆಲ್ ಅನಾವರಣ ಮಾಡಿತ್ತು. ಇದು ಸಂಪೂರ್ಣ ಉಚಿತವಾದ ಕಾರಣ, ದಿಢೀರ್ ಅಂತ ಟಾಕ್ ಆಫ್ ದಿ ಟೌನ್ ಆಗಿ ಬದಲಾಗಿತ್ತು. ಡೀಪ್‌ಸೀಕ್ ಸಖತ್ತಾಗಿದೆ ಎಂದು ಓಪನ್‌ಎಐ ಸಿಇಓ ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ, ಅರುಣಾಚಲ ಪ್ರದೇಶದ ಬಗ್ಗೆ ಡೀಪ್‌ಸೀಕ್ ಅನ್ನು ಪ್ರಶ್ನಿಸಿದ್ರೆ, ಇದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ಉತ್ತರಿಸುತ್ತಿದೆ. ಅರುಣಾಚಲ ಪ್ರದೇಶ ವಿಚಾರವಾಗಿ ಚೀನಾ-ಭಾರತದ ನಡುವೆ ವಿವಾದ ನಡೆಯುತ್ತಿದೆ. ಹೀಗಾಗಿ, ಡೀಪ್‌ಸೀಕ್ ಉತ್ತರ ಕುತೂಹಲ ಕೆರಳಿಸಿತ್ತು. ಇದನ್ನೂ ಓದಿ: ಡಾಲರ್‌ಗೆ ಗುದ್ದು ಕೊಡಲು ʻಬ್ರಿಕ್ಸ್ʼ ಕರೆನ್ಸಿ – ಭಾರತಕ್ಕೆ ಏನು ಲಾಭ?