Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಜೈನ ಸಮುದಾಯದ ಬ್ಯಾನರ್ ಹರಿದ ಹೋರಾಟಗಾರರು ರೌಡಿಗಳು: ತೇಜಸ್ವಿ ಸೂರ್ಯ

Public TV
Last updated: August 19, 2019 12:35 pm
Public TV
Share
3 Min Read
TejaswiSURYA
SHARE

– ಉರ್ದು ಭಾಷೆಯಲ್ಲಿ ಬ್ಯಾನರ್ ಹಾಕಿದ್ರೆ ಪ್ರಶ್ನೆ ಮಾಡಲ್ಲ
– ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

ಬೆಂಗಳೂರು: ಯುವ ಬಿಜೆಪಿ ನಾಯಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕನ್ನಡ ಸಂಘಟನೆಯ ಕಾರ್ಯಕರ್ತರ ಕುರಿತು ಮಾಡಿರುವ ಟ್ವೀಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜೈನ ದೇವಾಲಯದಲ್ಲಿ ಹಿಂದಿ ಬ್ಯಾನರ್ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈನ ಸಹೋದರರ ಮೇಲೆ ಕೆಲ ರೌಡಿಗಳು ದಾಳಿ ಮಾಡಿರುವುದು ಬಹಳ ನೋವಾಗಿದೆ. ಆದರೆ ಇವರು ಬೆಂಗಳೂರಿನಲ್ಲಿ ಉರ್ದು ಭಾಷೆ ಬಳಕೆ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡಿರುವ ಶಾಂತಿ ಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ನಿಜವಾದ ಕನ್ನಡಿಗರು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.

Deeply hurt over attack on our Jain brothers in B'luru over हिन्दी on a banner of a temple by few rowdy elements.

They however never question use of عربى in Bengaluru.

Assaulting peaceful Jains who contribute to Karnataka brings infamy to genuine Kannada lovers & activists.

— Tejasvi Surya (@Tejasvi_Surya) August 18, 2019

ಇದಾದ ನಂತರ ಮತ್ತೊಂದು ಟ್ವೀಟ್ ನಲ್ಲಿ ದೊಡ್ಡ ಕವಿಗಳಾದ ಪಂಪ, ಪೊನ್ನ, ರನ್ನ ರತ್ನತ್ರಯರಾಗಿದ್ದು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಈ ಮೂವರು ಜೈನರಾಗಿದ್ದಾರೆ. ಹೀಗಾಗಿ ಕರ್ನಾಟಕ ಯುವ ಜೈನರು ಕರ್ನಾಟಕದ ಇತಿಹಾಸವನ್ನು ಓದಬೇಕು ಮತ್ತು ಸಂವಹನದ ವೇಳೆ ಕನ್ನಡವನ್ನು ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.

Many great poets like Pampa, Ponna & Ranna known as Ratnatraya or three gems of Kannada literature were Jains. Very beginning of Kannada literature is Jaina Yuga.

Therefore, I urge today's young Jains in Karnataka to learn this history & also use Kannada in their communications.

— Tejasvi Surya (@Tejasvi_Surya) August 18, 2019

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಸಂಘಟನೆಯ ಸದಸ್ಯರನ್ನು ರೌಡಿಗಳು ಎಂದು ಕರೆದಿದ್ದಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. 6 ಸಾವಿರಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರೆ 23 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

https://twitter.com/SwamiGeetika/status/1163088798890094598

ಕನ್ನಡದ ನೆಲದಲ್ಲಿ ಕನ್ನಡ ಹಾಕದಿದ್ದರೆ ಪ್ರಶ್ನೆ ಮಾಡಬೇಕು ತಾನೇ? ಕನ್ನಡ ನೆಲದ ಜಾಗ, ನೀರು, ಹಣ ಎಲ್ಲಾ ಬೇಕು. ಆದರೆ ಕನ್ನಡ ಬೇಡವೇ? ಹೋಗಿ ಅವರನ್ನು ಓಲೈಕೆ ಮಾಡೋದು ನೋಡಿದರೆ ನೀವು ಕೇವಲ ಓಟಿಗಾಗಿ ನಿಮ್ಮ ಈ ಹೇಳಿಕೆ ಅನಿಸುತ್ತದೆ. ಅಷ್ಟು ಕನ್ನಡ ಜನರ ಕಾಳಜಿ ಇದ್ದರೆ ನೆರೆ ಪರಿಹಾರ ತರಬೇಕಿತ್ತು. ಬಕೆಟ್ ಹಿಡಿಯೋದೇ ಜೀವನವಾಗಬಾರದು ಎಂದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮಾನ್ಯ ಲೋಕಸಭಾ ‌ಸದಸ್ಯರೇ,

-ಕರ್ನಾಟಕದಲ್ಲಿರುವ ಬೋರ್ಡ್ ಗಳಲ್ಲಿ ಕನ್ನಡ ಇರಬೇಕು ಎನ್ನುವುದು ಹೇಗೆ ಅಪರಾಧ?

-ಇಲ್ಲದಿದ್ದಾಗ ಪ್ರಶ್ನಿಸುವುದು ಯಾವ ಅಪರಾಧ?

-ಕನ್ನಡಿಗರು ಏನೇ ಕೇಳಿದರೂ ಉರ್ದುವನ್ನು ಯಾಕೆ ಮಧ್ಯದಲ್ಲಿ‌ ತರುತ್ತೀರಾ?

-ಕನ್ನಡದ ವಿಷಯದಲ್ಲಿ‌ ಯಾಕೆ‌ ವಸ್ತುನಿಷ್ಠ ವಾಗಿ ಹೇಳಿಕೆ‌‌ ನೀಡುವುದಿಲ್ಲ?

— Kiran Kodlady | ಕಿರಣ್ ಕೊಡ್ಲಾಡಿ (@kodlady) August 18, 2019

ಕರ್ನಾಟಕದಲ್ಲಿರುವ ಬೋರ್ಡ್ ಗಳಲ್ಲಿ ಕನ್ನಡ ಇರಬೇಕು ಎನ್ನುವುದು ಹೇಗೆ ಅಪರಾಧ? ಇಲ್ಲದಿದ್ದಾಗ ಪ್ರಶ್ನಿಸುವುದು ಯಾವ ಅಪರಾಧ? ಕನ್ನಡಿಗರು ಏನೇ ಕೇಳಿದರೂ ಉರ್ದುವನ್ನು ಯಾಕೆ ಮಧ್ಯದಲ್ಲಿ ತರುತ್ತೀರಾ? ಕನ್ನಡದ ವಿಷಯದಲ್ಲಿ ಯಾಕೆ ವಸ್ತುನಿಷ್ಠ ವಾಗಿ ಹೇಳಿಕೆ ನೀಡುವುದಿಲ್ಲ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

ಏನಿದು ಪ್ರಕರಣ?
ಇನ್‍ಫೆಂಟ್ರಿ ರಸ್ತೆಯ ಬಳಿ ಜೈನ ಸಮುದಾಯದ ಪ್ರಾರ್ಥನಾ ಮಂದಿರದಲ್ಲಿ ಚಾತುರ್ಮಾಸ ಆಚರಣೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಿದ್ದಕ್ಕೆ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್‍ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಂಜನಪ್ಪ, ರಕ್ಷಣಾ ಸೇನೆಯ ರಮೇಶ್‍ಗೌಡ ಹಾಗೂ ಕರುನಾಡ ಸೇವಕರು ವೇದಿಕೆಯ ಮಾದೇಶ್‍ಗೌಡ ಈ ಬ್ಯಾನರ್ ಹರಿದು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಅಣ್ಣ ದೊಡ್ಡ ಮನುಷ್ಯ ಕನ್ನಡದ ನೆಲದಲ್ಲಿ ಕನ್ನಡ ಹಾಕದಿದ್ದರೆ ಪ್ರಶ್ನೆ ಮಾಡಬೇಕು ತಾನೇ?ಕನ್ನಡ ನೆಲದ ಜಾಗ,ನೀರು,ಹಣ ಎಲ್ಲಾ ಬೇಕು..ಆದರೆ ಕನ್ನಡ ಬೇಡ್ವ?
ಹೋಗಿ ಅವರನ್ನು ಓಲೈಕೆ ಮಾಡೋದು ನೋಡಿದರೆ ನೀವು ಕೇವಲ ಓಟಿಗಾಗಿ ನಿಮ್ಮ ಈ ಹೇಳಿಕೆ ಅನಿಸುತ್ತ
ಅಷ್ಟು ಕನ್ನಡ ಜನರ ಕಾಳಜಿ ಇದ್ದರೆ ನೆರೆ ಪರಿಹಾರ ತರಬೇಕಿತ್ತು
ಬಕೆಟ್ ಹಿಡಿಯೋದೆ ಜೀವನವಾಗಬಾರದು

— ಕನ್ನಡಿಗ ಮಂಜುನಾಥ್ ಸಿರುಗುಪ್ಪ (@manjumedicals) August 18, 2019

ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬ್ಯಾನರ್ ಹರಿದು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡಪರ ಸಂಘಟನೆಗಳ ಆರು ಮಂದಿ ಕಾರ್ಯಕರ್ತರನ್ನು ಕೋಮು ಸೌಹರ್ದತೆಗೆ ಧಕ್ಕೆ ತರುವ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರು ಮಂದಿಯನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಇತಿಹಾಸ ಎಲ್ಲರಿಗೂ ಗೊತ್ತಿದೆ ತೇಜಸ್ವಿಯವರೇ ಜೈನರು ಬಗ್ಗೆ ಮಾವ ಅಡಿಗರ ಬಗ್ಗೆ ನಿಮ್ಮಿಂದ ಹೇಳಿ ತುಳುಕುವಷ್ಟು ಮೂರ್ಖರಲ್ಲ ಈ ಕರುನಾಡಿನ ಕನ್ನಡಿಗರು ಕನ್ನಡಿಗರ ಇನ್ನೊಂದು ಹೆಸರೇ ಸಹಬಾಳ್ವೆ-ಸಮನ್ವಯ ಸೋದರತ್ವ ಸಹನಾಭೂತಿ ಬಾದಾಮಿ ಚಾಲುಕ್ಯರು ಹೊಯ್ಸಳರು ಕದಂಬರು ವಿಜಯನಗರ ಸಾಮ್ರಾಜ್ಯ ಹಿಂದಿನ ಕಾಲದಿಂದಲೂ ಜೈನರ ನಮ್ಮೊಂದಿಗೆ ಇದ್ದಾರೆ

— ಯಮನೂರ ಹಂಚಿನಾಳ yamanur Hanchinal ✍️ (@M100Yamanur) August 19, 2019

ಆನಂದ ಚಾತುರ್ಮಾಸ ಸಮಿತಿಯ ಕಾರ್ಯದರ್ಶಿ ಫ್ಯಾನ್‍ಚಂದ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜೈನ ಸಮುದಾಯಕ್ಕಾಗಿ ನಡೆಸುವ ಕಾರ್ಯಕ್ರಮ ಆಗಿರುವುದರಿಂದ ಬೇರೆಯವರಿಗೆ ಪ್ರವೇಶ ಇರುವುದಿಲ್ಲ. ಈಗಾಗಿ ಕನ್ನಡದಲ್ಲಿ ಬ್ಯಾನರ್ ಹಾಕಿರಲಿಲ್ಲ. ಹಿಂದೆಯೂ ಹಿಂದಿ ಭಾಷೆಯಲ್ಲಿಯೇ ಬ್ಯಾನರ್ ಹಾಕಿದ್ದೇವೆ. ಎಂದೂ ಕೂಡ ಇಂತಹ ಅನುಭವ ಆಗಿಲ್ಲ. ಶುಕ್ರವಾರ ಮಾತ್ರ ಕೆಲ ಕಾರ್ಯಕರ್ತರು ಬ್ಯಾನರ್ ಹರಿದಿದ್ದಾರೆ. ನಾವು ಕನ್ನಡ ವಿರೋಧಿಗಳಲ್ಲ. ಚಾತುರ್ಮಾಸ್ಯಕ್ಕೆ ಕನ್ನಡಿಗರು ಬಾರದ ಕಾರಣ ಹಿಂದಿಯಲ್ಲಿ ಬ್ಯಾನರ್ ಹಾಕಲಾಗಿತ್ತು ಎಂದು ಹೇಳಿದ್ದಾರೆ.

TAGGED:bengalurujainkannadaTejasvi Suryaಕನ್ನಡಕನ್ನಡ ಸಂಘಟನೆಕನ್ನಡ ಹೋರಾಟಗಾರರುತೇಜಸ್ವಿ ಸೂರ್ಯಬಿಜೆಪಿ
Share This Article
Facebook Whatsapp Whatsapp Telegram

Cinema news

Dharmam
ಧರ್ಮಂ ಟ್ರೈಲರ್ ಮೆಚ್ಚಿ ಸಾಥ್ ಕೊಟ್ಟ ಕಾಟೇರ ನಿರ್ದೇಶಕ
Cinema Latest Sandalwood Top Stories
Risha Gowda Gilli Nata
ರಿಷಾ ಪ್ರಕಾರ ಬಿಗ್‌ಬಾಸ್ ಟಾಪ್ 5 ಸ್ಪರ್ಧಿಗಳು ಇವರು!
Cinema Latest Top Stories TV Shows
Celina Jaitly
ಪತಿ ವಿರುದ್ಧ ಕೇಸ್ ದಾಖಲಿಸಿ 50 ಕೋಟಿ ಪರಿಹಾರ ಕೇಳಿದ `ಶ್ರೀಮತಿ’ ನಟಿ!
Cinema Latest Top Stories
gilli vs rajat
ಎಲ್ಲರ ಹತ್ರ ಮಾತಾಡ್ದಂಗೆ ನನ್‌ ಹತ್ರ ಮಾತಾಡ್ಬೇಡ: ಗಿಲ್ಲಿ ಮೇಲೆ ರಜತ್‌ ಗರಂ ಆಗಿದ್ಯಾಕೆ?
Cinema Latest Main Post TV Shows

You Might Also Like

Nandini Ghee
Bengaluru City

ನಂದಿನಿ ತುಪ್ಪ ಕಲಬೆರಕೆ ಪ್ರಕರಣ – ಕಿಂಗ್ ಪಿನ್ ದಂಪತಿ ಅರೆಸ್ಟ್‌

Public TV
By Public TV
47 seconds ago
Delhi Blast Accused Faridabad
Latest

ದೆಹಲಿ ಕಾರು ಸ್ಫೋಟ ಕೇಸ್‌ – ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ 7ನೇ ಆರೋಪಿ ಬಂಧಿಸಿದ ಎನ್‌ಐಎ

Public TV
By Public TV
15 minutes ago
Bengaluru Robbery Case 1
Bengaluru City

7.11 ಕೋಟಿ ದರೋಡೆ ಕೇಸ್‌ – ಗರ್ಭಿಣಿ ಹೆಂಡತಿಯರ ಆರೋಗ್ಯ ವಿಚಾರಿಸಲು ಹೋಗಿ ಸಿಕ್ಕಿಬಿದ್ದ ಇಬ್ಬರು ಆರೋಪಿಗಳು

Public TV
By Public TV
18 minutes ago
DK Shivakumars House 2 1
Bengaluru City

`ಪವರ್‌ ಫೈಟ್‌ʼ ನಡುವೆ ದೇವರ ಮೊರೆಹೋದ ಡಿಕೆಶಿ; ಮನೆಗೇ ʻಹಂದನ ಕೆರೆ ಅಜ್ಜಯ್ಯನ ಗದ್ದುಗೆʼ ಆಗಮನ!

Public TV
By Public TV
42 minutes ago
MURUGHA SHREE
Bengaluru City

ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಕೇಸ್ – ಇಂದು ಮೊದಲ ಪ್ರಕರಣದ ತೀರ್ಪು

Public TV
By Public TV
53 minutes ago
HV Venkatesh
Districts

ದಲಿತ ಸಿಎಂಗೆ ಅವಕಾಶ ಕೊಟ್ಟರೆ ಸಂತೋಷ: ಶಾಸಕ ಹೆಚ್‌ವಿ ವೆಂಕಟೇಶ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?