Connect with us

Bollywood

ದೀಪಿಕಾ, ರಣ್‍ವೀರ್ ನಡುವೆ ಬ್ರೇಕಪ್?- ಸುಳಿವು ನೀಡುತ್ತಿವೆ ಟ್ವೀಟ್‍ಗಳು!

Published

on

ಮುಂಬೈ: ಬಾಲಿವುಡ್ ಹಾಟ್ ಆ್ಯಂಡ್ ಸೆಕ್ಸಿ ಲವ್ ಬರ್ಡ್ಸ್ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ನಡುವೆ ಬ್ರೇಕ್ ಅಪ್ ಆಗಿದೆ ಎಂದು ಗಾಸಿಪ್ ಹರಿದಾಡುತ್ತಿದೆ. ಈ ಗಾಸಿಪ್ ಗೆ ಎಡೆಮಾಡಿಕೊಟ್ಟಿದ್ದು ರಣ್‍ವೀರ್ ಮಾಡಿರುವ ಟ್ವೀಟ್ ಗಳು.

ಈ ವರ್ಷದ ಬಹುನಿರೀಕ್ಷಿತ ಚಿತ್ರ ಪದ್ಮಾವತಿಯಲ್ಲಿ ದೀಪಿಕಾ, ರಣವೀರ್ ನಟಿಸಿದ್ದಾರೆ. ಸಿನಿಮಾ ಮುಂದಿನ ಡಿಸೆಂಬರ್ 1ರಂದು ತೆರೆಕಾಣಲು ಸಕಲ ತಯಾರಿ ನಡೆಸುತ್ತಿದೆ. ಇತ್ತ ಚಿತ್ರತಂಡ ಪ್ರಮುಖ ಕಲಾವಿದರು ಫಿಲ್ಮ್ ಪ್ರಮೋಶನ್‍ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಇದೂವರೆಗೂ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ದೀಪಿಕಾ ಮತ್ತು ರಣ್‍ವೀರ್ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಈ ಹಿಂದಿನ ಸಿನಿಮಾ ಪ್ರಚಾರದ ಕಾರ್ಯಕ್ರಮಗಳಲ್ಲಿ ಜೋಡಿಯಾಗಿ ಭಾಗವಹಿಸುತ್ತಿದ್ದ ಕ್ಯೂಟ್ ಕಪಲ್ ಈಗ ಒಬ್ಬಬ್ಬೊರೇ ಕಾಣ ಸಿಗುತ್ತಿದ್ದಾರೆ.

3ಡಿ ಟ್ರೇಲರ್ ಲಾಂಚ್‍ಗೆ ಬರಲಿಲ್ಲ ರಣ್‍ವೀರ್: ಪದ್ಮಾವತಿ ಸಿನಿಮಾವನ್ನು 3ಡಿ ಯಲ್ಲಿ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಕಳೆದ ವಾರವಷ್ಟೇ 3ಡಿ ಟ್ರೇಲರ್ ಕೂಡ ಲಾಂಚ್ ಆಗಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಚಿತ್ರದ ಪ್ರಮುಖ ಕಲಾವಿದರಾದ ರಣ್‍ವೀರ್, ಶಾಹಿದ್ ಮತ್ತು ದೀಪಿಕಾ ಹೆಸರನ್ನು ಹಾಕಿಸಿರಲಿಲ್ಲ. ಈ ಕಾರಣದಿಂದಾಗಿ ಶಾಹಿದ್ ಹಾಗೂ ರಣ್‍ವೀರ್ ಕಾರ್ಯಕ್ರಮದಿಂದ ದೂರು ಉಳಿದಿದ್ದರು. ಆದ್ರೆ ಆಶ್ಚರ್ಯಕರ ಎಂಬಂತೆ ದೀಪಿಕಾ ಪಡುಕೋಣೆ ಮಾತ್ರ 3ಡಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಿಂದ ಕಾರ್ಯಕ್ರಮ ಆಯೋಜಕರಿಗೆ ಆಶ್ಚರ್ಯವಾದ್ರೆ ಅತ್ತ ಸಹಕಲಾವಿದರು ಅದರಲ್ಲೂ ರಣ್‍ವೀರ್ ಕೋಪಕ್ಕೆ ಕಾರಣವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪದ್ಮಾವತಿ ಸಿನಿಮಾ ಮಹಿಳಾ ನಾಯಕಿ ಆಧಾರಿತ ಕಥೆಯನ್ನು ಹೊಂದಿದ್ದು, ಹಾಗಾಗಿ ದೀಪಿಕಾ ತನ್ನಿಬ್ಬರ ಸಹ ನಟರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಹಜವಾಗಿಯೇ ರಣ್‍ವೀರ್ ಮತ್ತು ದೀಪಿಕಾ ನಡುವ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ರಣ್‍ವೀರ್ ಕೂಡ ಇದಕ್ಕೆ ಪುಷ್ಠಿ ನೀಡುವಂತಹ ಟ್ವೀಟ್‍ಗಳನ್ನು ಮಾಡಿದ್ದು, ಅವರಿಬ್ಬರ ಬ್ರೇಕ್ ಅಪ್ ಬಗ್ಗೆ ಚಿಕ್ಕ ಸುಳಿವನ್ನು ನೀಡುತ್ತಿವೆ.

ಏನದು ಟ್ವೀಟ್?: ಕಳೆದ ರಾತ್ರಿ ಪದ್ಮಾವತಿ ಸಿನಿಮಾದ ಟ್ರೇಲರ್ ನೋಡಿದೆ. ಮೊದಲ ಬಾರಿಗೆ ನನ್ನನ್ನು ನಾನು 3ಡಿಯಲ್ಲಿ ನೋಡಿದೆ. ಸಖತ್ತಾಗಿದೆ ಎಂದು ರಣ್‍ವೀರ್ ಮೋದಲ ಟ್ವೀಟ್ ಮಾಡಿದ್ದಾರೆ. ಇವತ್ತು ಮೊದಲ ಬಾರಿಗೆ ನನಗೆ ದುಂಬಿಯೊಂದು ಕಚ್ಚಿದೆ. ಅದರ ಫೊಟೋವನ್ನು ಪೋಸ್ಟ್ ಮಾಡಬೇಕು ಎಂದುಕೊಂಡೆ . ಆದ್ರೆ ಆ ದುಂಬಿಯನ್ನ ಜನಪ್ರಿಯಗೊಳಿಸಲು ಇಷ್ಟವಿಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಕೊನೆಗೆ ಇವತ್ತು ನಡೆದ ಮೊದಲುಗಳಲ್ಲಿ, ನನ್ನ ಉಳಿದ ಜೀವನದ ಮೊದಲ ದಿನ ಇವತ್ತು. ಓಕೆ, ಈಗ ನನಗೆ ಸಾಕಾಗಿದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ರಣ್‍ವೀರ್ ಟ್ವೀಟ್‍ಗಳು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ರಣ್‍ವೀರ್ ಟ್ವೀಟ್ ಗಳಿಗೆ ದೀಪಿಕಾ ಮಾತ್ರ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.

ರಾಮ್‍ಲೀಲಾ ಸಿನಿಮಾದಿಂದ ತೆರೆಯ ಮೇಲೆ ಒಂದಾದ ಜೋಡಿ ನಂತರ ರಿಯಲ್ ಲೈಫ್‍ನಲ್ಲೂ ಒಂದಾಗಿ ಕಾಣಿಸಿಕೊಳ್ಳತೊಡಗಿದ್ದರು. ಇವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲಿ ಅಭಿಮಾನಿಗಳಿಗೆ ಇಷ್ಟವಾಗಿತ್ತು. ರಾಮ್‍ಲೀಲಾ ಮತ್ತು ಬಾಜೀರಾವ್ ಮಸ್ತಾನಿ ಸಿನಿಮಾಗಳಲ್ಲಿ ನಟಿಸಿದ್ದ ಜೋಡಿ `ಪದ್ಮಾವತಿ’ಯಲ್ಲೂ ಒಂದಾಗಿದೆ. ಪದ್ಮಾವತಿಯಲ್ಲಿ ರಣ್‍ವೀರ್ ಮತ್ತು ದೀಪಿಕಾ ನಡುವೆ ಯಾವುದೇ ರೊಮ್ಯಾಂಟಿಕ್ ಸೀನ್‍ಗಳಿಲ್ಲ ಎಂದು ಚಿತ್ರತಂಡ ಸ್ಪಷ್ಟಣೆ ನೀಡಿದೆ.

View this post on Instagram

Ranveer Singh as #Khilji

A post shared by Deepika Padukone (@deepikapadukone) on

View this post on Instagram

#Padmavati @FilmPadmavati

A post shared by Deepika Padukone (@deepikapadukone) on

Click to comment

Leave a Reply

Your email address will not be published. Required fields are marked *