ಹೈದರಾಬಾದ್‌ನಲ್ಲಿ ನಡೆದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆಗೆ (Deepika Padukone) ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಹೈದರಾಬಾದ್ (Hyderabad)ನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (hospital) ದಾಖಲಿಸಲಾಗಿದೆ. ಶೂಟಿಂಗ್ ಸೆಟ್‌ನಲ್ಲೇ ಅವರು ಅಸೌಖ್ಯದಿಂದಾಗಿ ಕುಸಿದರು ಎಂದು ಹೇಳಲಾಗುತ್ತಿದೆ. ಸುಸ್ತಿನಿಂದಾಗಿ ಸಾಕಷ್ಟು ಬಳಲಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ದೀಪಿಕಾ ಆರೋಗ್ಯ ಕೈ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ. ಆಗಾಗ್ಗೆ ಆಸ್ಪತ್ರೆಗೆ ದಾಖಲಾಗುತ್ತಲೇ ಇರುತ್ತಾರೆ. ಈ ಬಾರಿಯೂ ಶೂಟಿಂಗ್‌ನಲ್ಲೇ ಸುಸ್ತಾಗಿ ಕೂತಿದ್ದಾರೆ. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಹಲವಾರು ಟೆಸ್ಟ್‌ಗಳನ್ನು ಕೂಡ ಮಾಡಲಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗಿದೆ ಎನ್ನುವ ಮಾಹಿತಿಯೂ ಇದೆ. ಸೆಪ್ಟೆಂಬರ್ 26 ರಂದೇ ಈ ಘಟನೆ ನಡೆದಿದ್ದು, ಅವರ ಆರೋಗದ್ಯ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ಈ ಕಾರಣದಿಂದಾಗಿ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ
ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈ ಕಾರಣಕ್ಕಾಗಿ ಅವರು ಸುಸ್ತಾಗಿ ಕುಸಿದು ಕೂತರಾ ಎನ್ನುವ ಚರ್ಚೆ ಕೂಡ ನಡೆದಿದೆ. ದೀಪಿಕಾ ಪತಿ ರಣವೀರ್ ಸಿಂಗ್ (Ranveer Singh) ಆಗಲಿ, ಅಥವಾ ದೀಪಿಕಾ ಕುಟುಂಬವಾಗಲೇ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ದೀಪಿಕಾ ಅವರ ಆರೋಗ್ಯದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.