ಮುಂಬೈ: ಬಾಲಿವುಡ್ ಗುಳಿಕೆನ್ನೆ ಚೆಲುವೆ, ಬಾಜೀರಾವ್ ನ ಮಸ್ತಾನಿ ದೀಪಿಕಾ ಪಡುಕೋಣೆ ವಿಶೇಷ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದರ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಇಬ್ಬರು ಘಟಾನುಘಟಿ ನಾಯಕರ ಮುಂದೆ ಸ್ವಚ್ಛ ಭಾರತ ಮಂತ್ರಿಯಾಗಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ.
Advertisement
ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವೀಸ್, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಉಪಸ್ಥಿತರಿದ್ದರು. 2019ರ ವರ್ಷದ ಮಹಾರಾಷ್ಟ್ರೀಯನ್ ಪ್ರಶಸ್ತಿ ಸ್ವೀಕರಿಸಿದ ದೀಪಿಕಾ ಪಡುಕೋಣೆ, ನಾನು ಮೂಲತಃ ಕರ್ನಾಟಕದ ಬೆಂಗಳೂರಿನ ನಿವಾಸಿ. ನನ್ನ 18ನೇ ವಯಸ್ಸಿನಲ್ಲಿ ಹಲವು ಕನಸುಗಳನ್ನಿಟ್ಟುಕೊಂಡು ಸಣ್ಣದೊಂದು ಸೂಟ್‍ಕೇಸ್ ಹಿಡಿದುಕೊ0ಡು ಮುಂಬೈಗೆ ಬಂದೆ. ಕರ್ನಾಟಕ ನನ್ನ ತವರೂರು ಆದ್ರೆ, ಮಹಾರಾಷ್ಟ್ರ ನನ್ನ ಕರ್ಮಭೂಮಿ. ನನ್ನ ಕನಸುಗಳನ್ನು ನನಸು ಮಾಡಿದ್ದು ಮುಂಬೈ ಮಹಾನಗರಿ. ಅಂದಿನಿಂದ ಮುಂಬೈನಲ್ಲಿಯೇ ವಾಸವಾಗಿದ್ದೇನೆ. ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೀರೋದಕ್ಕೆ ಖುಷಿಯಾಗ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
Advertisement
Advertisement
ಸ್ವಚ್ಛ ಭಾರತ್ ಮಂತ್ರಿ ಯಾಕೆ?
ಚಿಕ್ಕವಳಿದ್ದಾಗ ನನ್ನ ಗೆಳತಿಯರು ತಮ್ಮ ಮನೆಗೆ ನನ್ನನ್ನು ಕರೆಯುತ್ತಿದ್ದರು. ನಾನು ಅಸ್ತವ್ಯಸ್ಥವಾಗಿದ್ದ ಅವರ ಕೋಣೆಯನ್ನು ಸ್ವಚ್ಛ ಮಾಡಿ ಬರುತ್ತಿದ್ದೆ. ಹೀಗೆ ಎಲ್ಲರೂ ನನ್ನ ಮನೆಗೆ ಬಾ ಎಂದು ಕರೆಯುತ್ತಿದ್ದರು. ಎಲ್ಲರಗಿಂತ ಭಿನ್ನ, ವಿಶೇಷ ವ್ಯಕ್ತಿಯಾಗಿದ್ದರಿಂದ ನನ್ನನ್ನು ಕರೆಯುತ್ತಾರೆ ಅಂತಾನೇ ತಿಳಿದಿದ್ದೆ. ಅವರೆಲ್ಲ ತಮ್ಮ ರೂಮ್ ಕ್ಲೀನ್ ಮಾಡಲು ನನ್ನನ್ನು ಕರೆಯುತ್ತಿದ್ದರು ಎಂಬುವುದು ತಿಳಿಯಿತು. ಆದರೂ ಮನೆಯೆಲ್ಲ ಕ್ಲೀನ್ ಮಾಡಿದಾಗ ಸಂತೃಪ್ತಿ ಸಿಗುತ್ತದೆ. ಶೂಟಿಂಗ್ ನಿಂದ ಬಳಿಕ ಮನೆಯನ್ನೆಲ್ಲ ಮೊದಲು ಸ್ವಚ್ಛ ಮಾಡುತ್ತೇನೆ. ರಾಜಕೀಯದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಒಂದು ವೇಳೆ ಮಂತ್ರಿಯಾದ್ರೆ ಸ್ವಚ್ಛ ಭಾರತ ಯೋಜನೆಗೆ ಮಿನಿಸ್ಟರ್ ಆಗಬೇಕೆಂಬ ಆಸೆ ಇದೆ ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv