ರಣ್‍ವೀರ್ ಸಿಂಗ್ `ನನ್ನವನು’ ಅಂತಾ ಕಮೆಂಟ್ ಮಾಡಿ ನಂತರ ಡಿಲೀಟ್ ಮಾಡಿದ್ರು ದೀಪಿಕಾ

Public TV
1 Min Read
ranveer deepika

ಮುಂಬೈ: ಬಾಲಿವುಡ್‍ನಲ್ಲಿ ಇತ್ತೀಚೆಗೆ ನಡೆದ `ಹೆಲ್ಲೋ ಹಾಲ್ ಆಫ್ ಫೇಮ್ ಅವಾರ್ಡ್ಸ್’ ನಲ್ಲಿ ರಣ್‍ವೀರ್ ಸಿಂಗ್‍ಗೆ `ಎಂಟರ್ಟೇನರ್ ಆಫ್ ದಿ ಇಯರ್’ ಪ್ರಶಸ್ತಿ ಲಭಿಸಿತ್ತು. ಈ ಖುಷಿಯಲ್ಲಿ ರಣ್‍ವೀರ್ ಸಿಂಗ್ ಇನ್ ಸ್ಟಾಗ್ರಾಮ್‍ನಲ್ಲಿ ಒಂದು ಫೋಟೋ ಹಾಕಿ ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಂಡಿದ್ದರು. ಈ ಫೋಟೋಗೆ ಗೆಳತಿ ದೀಪಿಕಾ ‘ನನ್ನವನು” ಎಂದು ಕಮೆಂಟ್ ಮಾಡಿ ನಂತರ ಅದನ್ನ ಡಿಲೀಟ್ ಮಾಡಿದ್ದಾರೆ.

“ನನ್ನವನು” ಎಂದು ಕಮೆಂಟ್ ಮಾಡಿ ತಕ್ಷಣ ಡಿಲೀಟ್ ಮಾಡಿರುವುದು ಎಲ್ಲರಿಗೂ ವಿಚಿತ್ರವೆನಿಸಿದೆ. ಬಾಲಿವುಡ್‍ನ ಹಾಟ್ ಮತ್ತು ಕ್ಯೂಟ್ ಕಪಲ್ ಎಂದೇ ಖ್ಯಾತಿಯನ್ನ ಪಡೆದಿರುವ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ತಮ್ಮ ಪ್ರೇಮದ ಸಂಬಂಧದ ಬಗ್ಗೆ ಇಲ್ಲಿಯವರೆಗೆ ಎಲ್ಲೂ ಕೂಡ ಬಹಿರಂಗವಾಗಿ ಹೇಳಿಕೊಂಡಿಲ್ಲ. ಬಾಲಿವುಡ್ ಅಂಗಳದಲ್ಲಿ ಇವರಿಬ್ಬರ ಪ್ರೇಮ ಕಥೆ ಎಲ್ಲರುಗೂ ಗೊತ್ತಿರುವ ವಿಷಯವಾಗಿದ್ದರೂ, ಡಿಪ್‍ವೀರ್ ಬಗ್ಗೆ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಈಗ ಅಧಿಕೃತ: ಕೊನೆಗೂ ನಿಗದಿಯಾಯ್ತು ರಣ್‍ವೀರ್-ದೀಪಿಕಾ ಮದುವೆ!

ಮೂಲಗಳ ಪ್ರಕಾರ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇದೇ ವರ್ಷದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೇವಲ ಆಪ್ತ ಬಂಧು ಬಳಗದ ಸಮ್ಮುಖದಲ್ಲಿ ಪ್ರಣಯ ಪಕ್ಷಿಗಳು ಒಂದಾಗಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ!

Deepika Comment

Share This Article
Leave a Comment

Leave a Reply

Your email address will not be published. Required fields are marked *