Connect with us

Bollywood

ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ!

Published

on

ನವದೆಹಲಿ: ಬಾಲಿವುಡ್‍ನ ಗುಳಿಕೆನ್ನೆ ಬೆಡಗಿ, ಪದ್ಮಾವತಿ ದೀಪಿಕಾ ಪಡುಕೋಣೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ್ದಾರೆ.

ಖ್ಯಾತ ಬ್ಯಾಡ್ಮಿಂಟನ್ ಆಟಗಾರರಾಗಿರುವ ದೀಪಿಕಾರ ತಂದೆ ಪ್ರಕಾಶ್ ಪಡುಕೋಣೆ `ಜೀವಮಾನ ಶ್ರೇಷ್ಠ’ ಪ್ರಶಸ್ತಿಯನ್ನು ಪಡೆದುಕೊಂಡರು. ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ನೀಡುವ ಲೈಫ್ ಟೈಮ್ ಅಚೀವ್‍ಮೆಂಟ್ ಅವಾರ್ಡ್ ಈ ಬಾರಿ ಪ್ರಕಾಶ್ ಪಡುಕೋಣೆ ಅವರಿಗೆ ಲಭಿಸಿದೆ. ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ದೀಪಿಕಾ, ತನ್ನ ತಂದೆಯನ್ನು ಕಂಡು ಒಂದು ಕ್ಷಣ ಭಾವುಕರಾಗಿದ್ದಾರೆ.

ದೀಪಿಕಾ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ ಕುಟುಂಬಕ್ಕೆ ಸಮಯವನ್ನು ಮೀಸಲಿಡುತ್ತಾರೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ತಾಯಿ ಉಜ್ಜಲಾ, ಸೋದರಿ ಅನಿಶಾ ಜೊತೆ ದೀಪಿಕಾ ಭಾಗಿಯಾಗಿದ್ರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಕಾಶ್ ಪಡುಕೋಣೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ರು.

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸಹ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿ ಪಡುಕೋಣೆ ಕುಟುಂಬದ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, `ಜೀವಮಾನ ಶ್ರೇಷ್ಠ ಪ್ರಶಸ್ತಿ ಪಡೆದ ಪಡುಕೋಣೆ ಸರ್‍ಗೆ ಹಾಗು ನಿಮ್ಮ ಸುಂದರ ಕುಟುಂಬಕ್ಕೆ ಶುಭಾಶಯಗಳು. ದೀಪಿಕಾ ನನ್ನ ನೆಚ್ಚಿನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ’ ಅಂತ ಬರೆದುಕೊಂಡಿದ್ದಾರೆ.

ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಪಡುಕೊಣೆ ಅವರು ಸಿಲ್ಕ್ ಸೀರೆ, ಅದಕ್ಕೆ ಸರಿಹೊಂದುವ ಉದ್ದನೆ ತೋಳಿನ ಬ್ಲೌಸ್ ಧರಿಸಿ ಅಪ್ಪಟ ದೇಸಿ ಲುಕ್‍ನಲ್ಲಿ ಕಂಗೊಳಿಸುತ್ತಿದ್ದರು. ಮುಂಬೈ ವಿಮಾನ ನಿಲ್ದಾಣದಿಂದ ದೆಹಲಿಗೆ ಬರುವ ಸಂದರ್ಭದಲ್ಲಿ ದೀಪಿಕಾ ಮತ್ತು ಸೋದರಿ ಅನಿಶಾ ಇಬ್ಬರು ನೀಲಿ ಬಣ್ಣದ ಜೀನ್ಸ್, ವೈಟ್ ಟೀಶರ್ಟ್ ಮೇಲೊಂದು ಕಪ್ಪು ಬಣ್ಣದ ಜ್ಯಾಕೆಟ್ ಧರಿಸಿ ಮಿಂಚಿದ್ದರು.

ಹಲವಾರು ವಿವಾದಗಳ ಬಳಿಕ ಇದೀಗ ದೀಪಿಕಾ ನಟಿಸಿದ್ದ `ಪದ್ಮಾವತ್’ ಚಿತ್ರ ಬಿಡಿಗಡೆಯಾಗಿದ್ದು, ಈಗಾಗಲೇ 100 ಕೋಟಿಗೂ ಅಧಿಕ ಹಣವನ್ನು ಗಳಿಸಿ ಮುನ್ನುಗುತ್ತಿದೆ. ಸಿನಿಮಾದಲ್ಲಿ ದೀಪಿಕಾ ರಜಪೂತ ರಾಣಿ ಪದ್ಮಾವತಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಾಕಷ್ಟು ಅಡೆ ತಡೆಗಳು ಉಂಟಾದರೂ ನೋಡುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

https://www.instagram.com/p/BeiwLF3DLCd/?taken-by=deepika_padukone05

https://www.instagram.com/p/BejsaotD7zl/?taken-by=deepika_padukone05

Click to comment

Leave a Reply

Your email address will not be published. Required fields are marked *