‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜೂನ್‌ನಿಂದ ಸಿನಿಮಾಗೆ ಬ್ರೇಕ್ ಕೊಟ್ಟು ವಿಶ್ರಾಂತಿ ಪಡೆಯಲಿದ್ದಾರೆ. ಅದಕ್ಕಾಗಿ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ನಟಿ ಪೂರ್ಣಗೊಳಿಸುತ್ತಿದ್ದಾರೆ. ಇದರ ನಡುವೆ ದೀಪಿಕಾ ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಮೊದಲ ಬಾರಿಗೆ ತಮ್ಮ ಸಿನಿಮಾಗಾಗಿ ಮಾತೃ ಭಾಷೆಯಲ್ಲಿ ನಟಿ ಡಬ್ ಮಾಡಲಿದ್ದಾರೆ.
ಪ್ರಭಾಸ್‌ಗೆ (Prabhas) ನಾಯಕಿಯಾಗಿ ನಟಿಸಿರುವ ‘ಕಲ್ಕಿ 2898 ಎಡಿ’ ಚಿತ್ರದ ಭಾರೀ ನಿರೀಕ್ಷೆಯಿದೆ. ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಹಿಂದಿಯಲ್ಲಿ ಡಬ್ ಮಾಡಲಿದ್ದಾರೆ. ಆದರೆ ವಿಶೇಷತೆ ಏನೆಂದರೆ, ಮೊದಲ ಬಾರಿಗೆ ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಡಬ್ ಮಾಡಲು ದೀಪಿಕಾ ಮುಂದಾಗಿದ್ದಾರೆ.
ಈ ಚಿತ್ರದಲ್ಲಿ ಪ್ರಭಾಸ್ ಮತ್ತು ದೀಪಿಕಾ ಜೊತೆ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ದಿಶಾ ಪಟಾನಿ ಕೂಡ ನಟಿಸಿದ್ದಾರೆ. ಸದ್ಯ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಕನ್ನಡದಲ್ಲಿ ದೀಪಿಕಾ ಡಬ್ ಮಾಡುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:‘ಹಲಗಲಿ’ ಚಿತ್ರದಿಂದ ಹೊರಬಂದಿದ್ದೇಕೆ? ಕಾರಣ ತಿಳಿಸಿದ ಡಾರ್ಲಿಂಗ್ ಕೃಷ್ಣ
ಅಂದಹಾಗೆ, ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ಅವರು ಮೊದಲ ಬಾರಿಗೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಐಶ್ವರ್ಯಾ’ ಚಿತ್ರದಲ್ಲಿ ನಟಿಸಿದ್ದರು. ಉಪೇಂದ್ರಗೆ ನಾಯಕಿಯಾಗಿ ಮಿಂಚಿದ್ದರು. ಇದೀಗ ದೀಪಿಕಾ ಬಾಲಿವುಡ್‌ನಲ್ಲಿ ನಂಬರ್ 1 ನಟಿಯಾಗಿ ಗುರುತಿಸಿಕೊಳ್ತಿದ್ದಾರೆ.