ಮುಂಬೈ: ಬಾಲಿವುಡ್ ನಟಿ ದಿಪೀಕಾ ಪಡುಕೋಣೆ ಮತ್ತು ಅವರ ಪತಿ ಪತಿ ರಣವೀರ್ ಸಿಂಗ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿರುತ್ತಾರೆ. ದೀಪಿಕಾ ಪಡುಕೋಣೆ ಪತಿಯ ತುಟಿಗೆ ಚುಂಬಿಸಿದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪತಿ ರಣವೀರ್ ಸಿಂಗ್ ಯಾವಾಗಲೂ ನನ್ನನ್ನು ತಬ್ಬಿಕೊಳ್ಳಲು ಮತ್ತು ಚುಂಬಿಸಲು ಇಷ್ಟಪಡುತ್ತಾರೆ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಈಗ ಹೇಳಿಕೆಯಂತೆ ಈಗ ಒಂದು ಫೋಟೋವನ್ನು ಅಭಿಮಾನಿಗಳು ಮೆಚ್ಚಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
View this post on Instagram
ದಂಪತಿ ತಮ್ಮ ರಜೆಯನ್ನು ಬೀಚ್ನಲ್ಲಿ ಕಳೆಯುತ್ತಿದ್ದಾರೆ. ಆ ಫೋಟೋದಲ್ಲಿ ಇಬ್ಬರು ಬೀಚ್ನಲ್ಲಿ ನಿಂತಿದ್ದಾರೆ ರಣವೀರ್ನನ್ನು ದೀಪಿಕಾ ಗಟ್ಟಿಯಾಗಿ ತಬ್ಬಿಕೊಂಡು ಚುಂಬಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ರಣವೀರ್ ಸಿಂಗ್ ಮಜವಾದ ಕ್ಯಾಪಶನ್ ಕೊಟ್ಟಿದ್ದಾರೆ.
ದೀಪಿಕಾ ಪಡುಕೋಣೆ ಅಭಿನಯದ ಗೆಹ್ರೈಯಾನ್ ಶೀರ್ಷಿಕೆ ಗೀತೆ ಡೂಬೆಯ ಸಾಹಿತ್ಯದೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಬಾಲಿವುಡ್ ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.