ಮುಂಬೈ: ಬಾಲಿವುಡ್ನ ಜನಪ್ರಿಯ ತಾರಾ ದಂಪತಿ ದೀಪಿಕಾ ಪಡುಕೋಣೆ(Deepika Padukone) ಮತ್ತು ರಣವೀರ್ ಸಿಂಗ್(Ranveer Singh) ವಿಜಯದಶಮಿಯ ಶುಭ ಸಂದರ್ಭದಲ್ಲಿ ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಮುದ್ದಾದ ಮಗಳಿಗೆ ದೇವಿ ಪಡುಕೋಣೆ ಸಿಂಗ್(Deepika Padukone Singh) ಎಂದು ನಾಮಕರಣ ಮಾಡಿದ್ದಾರೆ.
ಎರಡನೇ ಮಗುವಿನ ಆಗಮನದ ನಂತರ ಮೊದಲ ಬಾರಿಗೆ ಇಡೀ ಕುಟುಂಬದ ಮೊದಲ ಚಿತ್ರವನ್ನು ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಅಪರೂಪದ ಫೋಟೋವನ್ನು ಹಂಚಿಕೊಂಡಿರುವ ದೀಪಿಕಾ, “ಪ್ರೀತಿ ಮತ್ತು ಸಮೃದ್ಧಿ… ದೇವಿ ಪಡುಕೋಣೆ ಸಿಂಗ್” ಎಂದು ಪ್ರೀತಿಯ ಶೀರ್ಷಿಕೆ ನೀಡಿದ್ದಾರೆ.
View this post on Instagram
ಹಂಚಿಕೊಳ್ಳಲಾದ ಫೋಟೋದಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಅವರ ಮೊದಲ ಮಗಳು ದುವಾ ಹಾಗೂ ಪುಟ್ಟ ಕಂದಮ್ಮ ದೇವಿ ನಾಲ್ವರೂ ಒಂದೇ ರೀತಿಯ ಬಂಗಾರದ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ.
ರಣವೀರ್ ತಮ್ಮ ಹಿರಿಯ ಪುತ್ರಿ ದುವಾಳನ್ನು ಎತ್ತಿಕೊಂಡಿದ್ದು, ಆಕೆ ಪುಟ್ಟ ತಂಗಿಗೆ ಮುತ್ತಿಡುತ್ತಿರುವುದು ಮತ್ತು ದೀಪಿಕಾ ಮಗು ದೇವಿಯನ್ನು ಪ್ರೀತಿಯಿಂದ ಎದೆಯಪ್ಪಿಕೊಂಡಿರುವುದು ಚಿತ್ರದಲ್ಲಿ ಸೆರೆಯಾಗಿದೆ.
ಈ ಮುದ್ದಾದ ಕುಟುಂಬದ ಚಿತ್ರಕ್ಕೆ ಬಾಲಿವುಡ್ ಚಿತ್ರರಂಗದ ಶರ್ವರಿ, ಮೃಣಾಲ್ ಠಾಕೂರ್, ಭೂಮಿ ಪೆಡ್ನೇಕರ್, ಪ್ರಜ್ಞಾ ಜೈಸ್ವಾಲ್, ಹರ್ಷದೀಪ್ ಕೌರ್ ಸೇರಿದಂತೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ಹಾರೈಸಿ ಶುಭ ಕೋರಿದ್ದಾರೆ. ದೀಪಿಕಾ-ರಣವೀರ್ ದಂಪತಿ 2026ರ ಸೆಪ್ಟೆಂಬರ್ 19 ರಂದು ಎರಡನೇ ಮಗುವನ್ನು ಸ್ವಾಗತಿಸಿದ್ದರು.
