ಬೆಂಗಳೂರು: ಅಮ್ಮನನ್ನು ಮರೆಯುತ್ತಿದ್ದೇನೆ ಎಂದು ದೀಪಿಕಾ ದಾಸ್ ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.
ದೀಪಿಕಾ ದಾಸ್ ಬಿಗ್‍ಮನೆಗೆ ಎಂಟ್ರಿ ಕೊಟ್ಟ ಮೊದಲ ಎರಡು ವಾರಗಳ ಕಾಲ ಯಾವುದೇ ಸ್ಪರ್ಧಿಯ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ನಂತರ ಬಿಗ್‍ಬಾಸ್ ನೀಡುತ್ತಿದ್ದ ಟಾಸ್ಕ್ ಮಾಡುತ್ತಾ, ಮಾಡುತ್ತಾ ಮನೆಯ ಸದಸ್ಯರ ಜೊತೆ ಚೆನ್ನಾಗಿ ಮಾತನಾಡಲು ಶುರು ಮಾಡಿದ್ದಾರೆ. ದೀಪಿಕಾ ಯಾವುದೇ ಗೇಮ್ ಬಂದರೂ ತುಂಬಾ ಚೆನ್ನಾಗಿ ಆಟವಾಡುತ್ತಿದ್ದರು. ಆದರೆ ಸೋಮವಾರದ ಸಂಚಿಕೆಯಲ್ಲಿ ದೀಪಿಕಾ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ.
ಹೌದು. ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಕ್ಯಾಪ್ಟನ್ ಆಯ್ಕೆಗಾಗಿ ಪ್ರಿಯಾಂಕಾ, ದೀಪಿಕಾ ಮತ್ತು ಚಂದನ್ ಆಚಾರ್ ಮೂವರಿಗೆ ಬಿಗ್‍ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಟಾಸ್ಕಿನಲ್ಲಿ ಪ್ರಿಯಾಂಕಾ ವಿಜೇತರಾಗಿದರು. ಕ್ಯಾಪ್ಟನ್ ಆದವರಿಗೆ ಅವರ ಮನೆಯವರಿಂದ ಬಿಗ್‍ಬಾಸ್ ಧ್ವನಿ ಕೇಳಿಸುತ್ತಾರೆ. ಅದೇ ರೀತಿ ಪ್ರಿಯಾಂಕಾ ಅವರ ಅಮ್ಮ ಮಾತಾಡಿದ್ದಾರೆ.
ಇತ್ತ ಟಾಸ್ಕ್ ಬಗ್ಗೆ ದೀಪಿಕಾ, ಕಿಶನ್ ಮಾತಾಡುತ್ತಿದ್ದರು. ಆಗ ದೀಪಿಕಾ ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ನಂತರ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ. ಆಗ ಪ್ರಿಯಾಂಕಾ ಮತ್ತು ಕಿಶನ್ ಸಮಾಧಾನ ಮಾಡಿದ್ದಾರೆ. ಆದರೂ ದೀಪಿಕಾ, ಅಮ್ಮನನ್ನು ನಾನು ಮರೆಯುತ್ತಿದ್ದೇನೆ ಎಂದು ಪ್ರಿಯಾಂಕಾರನ್ನು ತಬ್ಬಿಕೊಂಡು ಜೋರಾಗಿ ಕಣ್ಣೀರು ಹಾಕಿದ್ದಾರೆ.