ನಾಗಿಣಿ ಬ್ಯೂಟಿ, ಬಿಗ್ ಬಾಸ್ ಕನ್ನಡ ಸೀಸನ್ 7ರ (Bigg Boss Kannada 7) ಸ್ಪರ್ಧಿ ದೀಪಿಕಾ ದಾಸ್ (Deepika Das) ಸದ್ಯ ಪತಿ ಜೊತೆ ವೆಕೇಷನ್ ಮೂಡ್‌ನಲ್ಲಿದ್ದಾರೆ. ಟರ್ಕಿಯಲ್ಲಿ ಚಿಟ್ಟೆಯಾಗಿ ಮಿಂಚಿದ್ದ ನಟಿ, ಈಗ ಕೊಂಬೆ ಮೇಲೆ ನಾಗಿಣಿಯಂತೆ ಮಲಗಿಕೊಂಡಿದ್ದಾರೆ. ಈ ಫೋಟೋ ನೋಡಿ ನಿಜವಾದ ನಾಗಿಣಿ ನೀವೇ ಅಂತಾ ಕಾಮೆಂಟ್ ಮಾಡಿದ್ದಾರೆ.
ಪತಿ ಜೊತೆ ದೀಪಿಕಾ ಟರ್ಕಿಯಲ್ಲಿ ಬೀಡು ಬಿಟ್ಟಿದ್ದಾರೆ. ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದರು. ನಟಿಯ ಆಕರ್ಷಕ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿತ್ತು. ಈಗ ಹಸಿರು ಬಣ್ಣದ ಡ್ರೆಸ್‌ನಲ್ಲಿ ಕೊಂಬೆ ಮೇಲೆ ನಾಗಿಣಿಯಂತೆ ಮಲಗಿ ನಟಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸಮಂತಾ ಬಗ್ಗೆ ‘ಪುಷ್ಪ 2’ ಡೈರೆಕ್ಟರ್ ಶಾಕಿಂಗ್ ಕಾಮೆಂಟ್
ದೀಪಿಕಾ ದಾಸ್‌ಗೆ ಗೋವಾದಲ್ಲೇ ಮದುವೆಯಾಗುವ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ದೀಪಕ್ ಅವರ ಮೇಲೆ ನಿಮಗೆ ಲವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಮನಬಿಚ್ಚಿ ಮಾತನಾಡಿದ್ದರು. ದೀಪಕ್ ಮತ್ತು ನಾನು ನಾಲ್ಕು ವರ್ಷದ ಸ್ನೇಹಿತರು. 4 ವರ್ಷಗಳ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದರು.
ದೀಪಕ್ ಅವರಿಗೆ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು. ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು. ನನಗೆ ಟೈಮ್ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ಅದೇ ರೀತಿ ನಾನು ಅಂದುಕೊಂಡ ಹಾಗೇ ನನಗೆ ನನ್ನ ಸಂಗಾತಿ ಸಿಕ್ಕಿದ್ದಾರೆ ಅಂತ ಮಾತನಾಡಿದ್ದರು.
ಬಳಿಕ ದೀಪಿಕಾ ದಾಸ್ ಪತಿ ದೀಪಕ್ ಮಾತನಾಡಿ, ನಾನು ದುಬೈ ಮೂಲದವನು ಅಲ್ಲ. ಇದೆ ಬೆಂಗಳೂರಿನ ಆರ್‌ಆರ್ ನಗರದವನು. ರಿಯಲ್ ಎಸ್ಟೇಟ್ ಜೊತೆ ದುಬೈನಲ್ಲಿ ಒಂದು ಐಟಿ ಕಂಪನಿ ಇದೆ. ದೀಪಿಕಾ ನನಗೆ ನಾಲ್ಕು ವರ್ಷಗಳಿಂದ ಗೊತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಇಷ್ಟು ದಿನ ಹೇಗೆಲ್ಲಾ ದೀಪಿಕಾಗೆ ಬೆಂಬಲಿಸಿದ್ರೋ ಮುಂದಿನ ದಿನಗಳಲ್ಲಿ ಕೂಡ ಅವಳಿಗೆ ಸಪೋರ್ಟ್ ಮಾಡಿ ಎಂದು ದೀಪಕ್ ಮನವಿ ಮಾಡಿದ್ದರು.