ದೀಪಿಕಾ ದಾಸ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್ – ದೊಡ್ಮನೆಯಿಂದ ಔಟ್

Public TV
1 Min Read
deepika das 1 2

ಬಿಗ್ ಬಾಸ್ ಸೀಸನ್ 8 ರಲ್ಲಿ ಫೈನಲಿಸ್ಟ್ ಆಗಿ ಗಮನ ಸೆಳೆದಿದ್ದ ಸ್ಪರ್ಧಿ ದೀಪಿಕಾ ದಾಸ್ (Deepika Das), ಬಿಗ್ ಬಾಸ್ ಸೀಸನ್ 9ಕ್ಕೂ (Bigg Boss Kannada) ಕಾಲಿಟ್ಟಿದ್ದರು. ಪ್ರವೀಣರ ಸಾಲಿನಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ದೀಪಿಕಾ ಹೊರಬಂದಿದ್ದಾರೆ.

deepika das 6

ಕಿರುತೆರೆಯಲ್ಲಿ ಮೋಡಿ ಮಾಡಿದ್ದ ದೀಪಿಕಾ ದಾಸ್, ಟಿವಿ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆಯನ್ನ ಪಡೆದುಕೊಂಡಿದ್ದರು. ಯಾವುದೇ ಗುಂಪಿನಲ್ಲಿ ಸೇರಿಕೊಳ್ಳದೇ ಸಿಂಗಲ್ ಆಗಿ ಎದುರು ಇರುವ ಸ್ಪರ್ಧಿಗೆ ಟಕ್ಕರ್ ಕೊಡುತ್ತಿದ್ದರು. ಈಗ ಸಾನ್ಯ ಎಲಿಮಿನೇಷನ್ ನಂತರ ಈ ವಾರ ದೀಪಿಕಾ ದಾಸ್ ಔಟ್ ಆಗಿದ್ದಾರೆ. ಇದನ್ನೂ ಓದಿ: ಆಶಿಕಾ ರಂಗನಾಥ್ ಕುಡಿದು ರಂಪಾಟ: ಚಿತ್ರದ ಮಾರ್ಕೆಟಿಂಗ್ ಟೀಮ್ ತಪ್ಪು ಎಂದ ಡೈರೆಕ್ಟರ್

deepika das 4

ಟಾಸ್ಕ್, ಅಡುಗೆ, ಮನರಂಜನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ದೀಪಿಕಾ ದಾಸ್ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಅಲ್ಲದೆ ಕಳೆದ ವಾರ ಬಿಗ್ ಬಾಸ್ ಶೋ 50 ದಿನ ಪೂರೈಸಿತ್ತು. ಹಾಗಾಗಿ ಎಲಿಮಿನೇಷನ್ ಕೂಡ ನಡೆದಿರಲಿಲ್ಲ. ಈ ಬಾರಿ ದೀಪಿಕಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.

ಬಿಗ್ ಬಾಸ್‌ಗೆ ಕಾಲಿಡುವ ಮುಂಚೆನೇ ದೀಪಿಕಾ, ಸಿನಿಮಾವೊಂದನ್ನ ಒಪ್ಪಿಕೊಂಡಿದ್ದರು. ತಮ್ಮ ಭಾಗದ ಚಿತ್ರೀಕರಣ ಕೂಡ ಮುಗಿಸಿಕೊಟ್ಟಿದ್ದರು. ಇನ್ಮುಂದೆ ಈ ನಟಿಯನ್ನ ಬೆಳ್ಳಿ ಪರದೆಯಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ: ‘ಕಾಂತಾರ’ ಸಿನಿಮಾ ನೋಡಿ ಕಣ್ಣೀರಿಟ್ಟ ಬಾಲಿವುಡ್ ನಟ ಸುನೀಲ್ ಶೆಟ್ಟಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *