ಪೇಡ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಆದರೆ ನೀವು ಬೇಕರಿಗೆ ಹೋಗಿಯೇ ಪೇಡ ಖರೀದಿ ಮಾಡಬೇಕಿಲ್ಲ. ಮನೆಯಲ್ಲೇ ಪೇಡ ಮಾಡಿ ತಿನ್ನಬಹುದು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೇಕರಿ ಸ್ಟೈಲ್ ಪೇಡ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಬೇಕಾಗುವ ಸಾಮಾಗ್ರಿಗಳು:
1. ಹಾಲಿನ ಪುಡಿ – 1 ಕಪ್
2. ಹಾಲು – 1 ಕಪ್
3. ಸಕ್ಕರೆ – 1/3 ಕಪ್
4. ಮೈದಾ ಹಿಟ್ಟು – 1/4 ಕಪ್
5. ತುಪ್ಪ – 2 ಚಮಚ
6. ಏಲಕ್ಕಿ ಪುಡಿ – ಚಿಟಿಕೆ
7. ಕೇಸರಿ ಪುಡಿ (ಬೇಕಾದರೆ) – ಚಿಟಿಕೆ
Advertisement
Advertisement
ಮಾಡುವ ವಿಧಾನ:
1. ಸಕ್ಕರೆ ಪುಡಿ, ಹಾಲಿನ ಪುಡಿ, ಏಲಕ್ಕಿ ಪುಡಿ, ಕೇಸರಿ ಪುಡಿ ಎಲ್ಲವನ್ನ ಒಂದು ನಾನ್ ಸ್ಟಿಕ್ ಪ್ಯಾನಲ್ಲಿ ಹಾಕಿ ಹುರಿದುಕೊಳ್ಳಿ.
2. ಸ್ವಲ್ಪ ಬೆಚ್ಚಗಾದ ನಂತರ ಹಾಲನ್ನ ಬೆರೆಸಿ, ಗಂಟಾಗದಂತೆ ನಿಧಾನವಾಗಿ ತಿರುಗಿಸಿ.
3. ಮಧ್ಯಮ ಉರಿಯಲ್ಲಿ ನಿಧಾನವಾಗಿ ತಿರುಗಿಸುತ್ತಾ, ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತಾ ಬಂದಾಗ, ತುಪ್ಪವನ್ನ ಹಾಕಿ ತಿರುಗಿಸಿ.
4. ಈ ಮಿಶ್ರಣ ಯಾವಾಗ ಪ್ಯಾನ್ ತಳಕ್ಕೆ ಅಂಟಿಕೊಳ್ಳದಂತೆ ನಿಮ್ಮ ಕೈಗೆ ಸಣ್ಣ ಪ್ರಮಾಣದ ಹಿಟ್ಟನ್ನ ತೆಗೆದುಕೊಂಡು ಪರೀಕ್ಷಿಸಿಕೊಳ್ಳಿ. ಈ ವೇಳೆ ಕೈಗೆ ಅಂಟಿಕೊಳ್ಳದಿದ್ದರೆ ಸ್ಟವ್ ಆರಿಸಿ.
5. ಇತ್ತ ಒಂದು ತಟ್ಟೆಗೆ ತುಪ್ಪ ಸವರಿ ಅದಕ್ಕೆ ಹಿಟ್ಟನ್ನ ಹಾಕಿಕೊಳ್ಳಿರಿ. ಸ್ವಲ್ಪ ತಣ್ಣಗಾದ ಮೇಲೆ, ಸಣ್ಣ-ಸಣ್ಣ ಉಂಡೆಗಳನ್ನಾಗಿ ಮಾಡಿರಿ.
6. ಪೇಡಾಗಳನ್ನ ಉಂಡೆಗಳನ್ನಾಗಿ ಮಾಡಲು ಸಾಧ್ಯವಾಗದಿದ್ದರೆ, ಮತ್ತೆ ಸ್ಟವ್ ಮೇಲೆ ಹಿಟ್ಟನ್ನ 1-2 ನಿಮಿಷದವರೆಗೂ ಬೇಯಿಸಿ.
7. ಬೇಯಿಸಿದ ಹಿಟ್ಟನ್ನ ಚೆನ್ನಾಗಿ ನಾದಿರಿ. ನಂತರ ನಿಮ್ಮ ಕೈಗಳಿಗೆ ತುಪ್ಪವನ್ನ ಸವರಿಕೊಂಡು ಉಂಡೆಗಳನ್ನ ಮಾಡಲು ಶುರು ಮಾಡಿರಿ.
8. ತಣ್ಣಗಾದ ಉಂಡೆಗಳನ್ನ ಕೇಸರಿ ಮತ್ತು ಬಾದಾಮಿಗಳಿಂದ ಅಲಂಕಾರ ಮಾಡಿ ಸವಿಯಿರಿ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv