ನವದೆಹಲಿ: ದೇಶ ಸೇವೆ ವೇಳೆ ಯೋಧರು ಹುತಾತ್ಮರಾದರೆ, ಅವರ ಪತ್ನಿಯರು ತಾವು ಕೂಡಾ ಸೇನೆ ಸೇರಿ ದೇಶ ಸೇವೆಗೆ ಕೈ ಜೋಡಿಸುವ ಪರಂಪರೆ ಮುಂದುವರಿದಿದ್ದು, ಈಗ ಗಲ್ವಾನ್ ವೀರ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ದೇವಿ ಕೂಡಾ ಸಜ್ಜಾಗಿದ್ದಾರೆ.
2020ರಲ್ಲಿ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ವಿರುದ್ಧ ಹೋರಾಡುವ ವೇಳೆ ಅಪ್ರತಿಮ ಸಾಹಸ ತೋರುತ್ತಲೇ ದೀಪಕ್ ಸಿಂಗ್ ಸಾವನ್ನಪ್ಪಿದ್ದರು. ಅವರ ಸಾಹಸಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ವೀರ ಚಕ್ರ ನೀಡಿ ಗೌರವಿಸಿತ್ತು. ಈ ಗೌರವವನ್ನು ಹುತಾತ್ಮ ಯೋಧ ದೀಪಕ್ ಅವರ ಪತ್ನಿ ರೇಖಾ ಸ್ವೀಕರಿಸಿದ್ದರು. ಇದನ್ನೂ ಓದಿ: ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ
Advertisement
Advertisement
ಪತಿಯ ಹಾದಿಯಲ್ಲೇ ರೇಖಾ ಕೂಡಾ ಸೇನೆಗೆ ಸೇರ್ಪಡೆಯಾಗಲು ಮಂದಾಗಿದ್ದಾರೆ. ಈ ಕುರಿತ ಮೊದಲ ಹಂತದ ಕಠಿಣವಾದ ವ್ಯಕ್ತಿತ್ವ ಮತ್ತು ಗುಪ್ತಚರ ಪರೀಕ್ಷೆಯಲ್ಲಿ ರೇಖಾ ಉತ್ತೀರ್ಣರಾಗಿದ್ದಾರೆ.
Advertisement
ಮುಂಧಿನ ಹಂತದಲ್ಲಿ ಅವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಬಳಪಡಬೇಕಿದೆ. ಇದರಲ್ಲಿ ಉತ್ತೀರ್ಣರಾದರೆ ಚೆನ್ನೈನಲ್ಲಿರುವ ಆಫೀಸರ್‌ಗಳ ಬಳಿ ಟ್ರೈನಿಂಗ್ ಅಕಾಡೆಮಿಗೆ ಸೇರುವ ಅವಕಾಶ ಪಡೆಯಲಿದ್ದಾರೆ.