– 24 ಎಸೆತಗಳಲ್ಲಿ 20 ಡಾಟ್ ಬಾಲ್
ಚೆನ್ನೈ: ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಚೆನ್ನೈ ಬೌಲರ್ ಗಳು ಪಂದ್ಯ ಗೆಲುವಿಗೆ ಕಾರಣರಾದರೆ, ತಂಡದ ಯುವ ಬೌಲರ್ ದೀಪಕ್ ಚಹಾರ್ ಅದ್ಭುತವಾಗಿ ತಮ್ಮ ಸ್ಪೆಲ್ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.
ಪಂದ್ಯದಲ್ಲಿ 24 ಎಸೆತ ಅಂದರೆ 4 ಓವರ್ ಬೌಲ್ ಮಾಡಿದ ಚಹಾರ್ ಅದರಲ್ಲಿ 20 ಎಸೆತಗಳನ್ನು ಡಾಟ್ ಮಾಡಿ ದಾಖಲೆ ಬರೆದಿದ್ದಾರೆ. ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದಿದ್ದ ನೆಹ್ರಾ, ಮುನಾಫ್ ಪಟೇಲ್, ಎಡ್ವರ್ಡ್ ಅವರ ದಾಖಲೆಯನ್ನ ಮುರಿದಿದ್ದಾರೆ. 2009 ಟೂರ್ನಿಯಲ್ಲಿ ಈ ಮೂವರು ಆಟಗಾರರು ಪಂದ್ಯವೊಂದರಲ್ಲಿ 19 ಡಾಟ್ ಬಾಲ್ ಎಸೆದು ಜಂಟಿಯಾಗಿ ದಾಖಲೆ ಬರೆದಿದ್ದರು.
Deepak Chahar is our key performer for the @ChennaiIPL innings with bowling figures of 3/20 ????????#CSKvKKR b pic.twitter.com/kzcYKIeUsv
— IndianPremierLeague (@IPL) April 9, 2019
ಪಂದ್ಯದಲ್ಲಿ ತಮ್ಮ ಸ್ಪೆಲ್‍ನಲ್ಲಿ 20 ರನ್ ನೀಡಿ 3 ವಿಕೆಟ್‍ಗಳನ್ನು ಪಡೆಯುವ ಚಹಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಕೋಲ್ಕತ್ತಾ ವಿರುದ್ಧದ ಪಂದ್ಯವನ್ನು ಗೆಲ್ಲವು ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಕೋಲ್ಕತ್ತಾ ಪಂದ್ಯಕ್ಕೂ ಮುನ್ನದ ಮ್ಯಾಚ್‍ನಲ್ಲಿ ಚಹಾರ್ ವಿರುದ್ಧ ಕೂಲ್ ಕ್ಯಾಪ್ಟನ್ ಗರಂ ಆಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಧೋನಿ ಚಹಾರ್ ಮೇಲೆ ಕೋಪಗೊಂಡಿದ್ದರು. ಪಂಜಾಬ್ ಬ್ಯಾಟಿಂಗ್ ವೇಳೆ 19ನೇ ಓವರ್ ಎಸೆದ ಚಹಾರ್, ಸತತ 2 ನೋ ಬಾಲ್ ಎಸೆದಿದ್ದರು. ಇದರಿಂದ ಅಸಮಾಧಾನಗೊಂಡ ಧೋನಿ ಗರಂ ಆಗಿ ಚಹಾರ್ ಬಳಿ ಬಂದು ಕೆಲ ಸಲಹೆಗಳನ್ನ ನೀಡಿದರು. ಪರಿಣಾಮ ಮರು ಎಸೆತದಲ್ಲೇ ಡೇವಿಡ್ ಮಿಲ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಚಹಾರ್ ಮೆಚ್ಚುಗೆ ಪಡೆದಿದ್ದರು.
Deepak Chahar, you beauty ????????#KKR 9/3 after 3 overs https://t.co/e7aOe9HD3u pic.twitter.com/KBBANLtxOH
— IndianPremierLeague (@IPL) April 9, 2019
MS Dhoni schooling Deepak Chahar for his back to back no balls #CSKvKXIP #IPL2019 pic.twitter.com/iRhGQ62gib
— Deepak Verma (@dpakwa) April 6, 2019