ಬೆಂಗಳೂರು: ಮಚಲೀಪಟ್ಟಣಂನಿಂದ (Machilipatnam) ಯಶವಂತಪುರಕ್ಕೆ (Yeshwantpur) ಬಂದ ರೈಲ್‍ನ ಬೋಗಿಯೊಂದರಲ್ಲಿ ಪ್ಲಾಸ್ಟಿಕ್ ಡ್ರಮ್ ಬಂದಿತ್ತು. ಸ್ವಚ್ಛತಾ ಸಿಬ್ಬಂದಿ ಡ್ರಮ್ ಇಳಿಸಿ ರೈಲ್ ಕ್ಲೀನ್ ಮಾಡಿದ್ರು. ಈ ವೇಳೆ ಸಿಕ್ಕಿದ್ದ ಮಹಿಳೆಯ ಶವ ಇದೀಗ ತಿಂಗಳಾದ್ರು ಯಾರದ್ದು ಎಂಬುದು ಗೊತ್ತಾಗಿಲ್ಲ.
Advertisement
ಜನವರಿ 4 ರಂದು ಯಶವಂತಪುರ ರೈಲ್ವೇ ನಿಲ್ದಾಣದ (Railway Station) ಪ್ಲಾಟ್‌ಫಾರ್ಮ್ ಡ್ರಮ್‍ವೊಂದರಿಂದ ಕೆಟ್ಟ ವಾಸನೆ ಬರ್ತಿತ್ತು. ಇದೇನಪ್ಪ ಅಂತಾ ತೆಗೆದು ನೋಡಿದ ಪೊಲೀಸ್ರಿಗೆ (Police) ಶಾಕ್ ಆಗಿತ್ತು. ಅದಾಗಲೇ ಕೊಳೆತಿದ್ದ ಮಹಿಳೆಯ ಶವ ಡ್ರಮ್‍ನಲ್ಲಿ ಸಿಕ್ಕಿತ್ತು. ಇದು ಯಾರದ್ದಪ್ಪ ಅಂತಾ ಹುಡುಕಲು ಹೊರಟ ಪೊಲೀಸ್ರಿಗೆ ಇದೀಗ ತಿಂಗಳಾದ್ರು ಕೊಲೆ ಹಂತಕರ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: ಸ್ನೇಹಿತನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ನಗ್ನಚಿತ್ರ ತೆಗೆದು ಆಕೆಯ ತಾಯಿಗೆ ಕಳುಹಿಸಿದ
Advertisement
ಮಚಲೀಪಟ್ಟಣಂನಿಂದ ಬಂದ ಟ್ರೈನ್‍ನಲ್ಲಿ ಮಹಿಳೆಯ ಶವ ಬಂದಿದೆ. ಡ್ರಮ್ ಕೆಳಗಿಳಿಸಿದ ಕ್ಲೀನಿಂಗ್ ಸಿಬ್ಬಂದಿ ಟ್ರೈನ್ ಕ್ಲೀನ್ ಮಾಡಿದ್ದಾರೆ. ಆದ್ರೆ ಡ್ರಮ್ ತೆರೆದು ನೋಡುವ ಉಸಾಬರಿಗೆ ಹೋಗಿಲ್ಲ. ಯಾವಾಗ ಕೆಟ್ಟ ವಾಸನೆ ಬಂತೋ ಆಗ ಪೊಲೀಸರು ಡ್ರಮ್ ತೆರೆದು ನೋಡಿದಾಗ ಮಹಿಳೆಯ ಶವ ಸಿಕ್ಕಿದೆ. ಪೊಲೀಸ್ರು ವಿಚಾರಣೆ ನಡೆಸಿದಾಗ ಕ್ಲೀನಿಂಗ್ ಸಿಬ್ಬಂದಿ ಡ್ರಮ್ ಮಾತ್ರ ಕೆಳಗಿಳಿಸಿರುವ ಮಾಹಿತಿ ಸಿಕ್ಕಿದೆ. ಇದಾದ ಬಳಿಕ ಮಚಲೀಪಟ್ಟಣಂ ಸುತ್ತಮುತ್ತ ಎಲ್ಲಾ ಪಂಚಾಯತ್‍ಗಳಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆಯೇ ಎಂದು ತನಿಖೆ ಆರಂಭಿಸಿದಾಗ ಈ ರೀತಿಯ ಪ್ರಕರಣಗಳು ದಾಖಲಾಗಿಲ್ಲ. ಮಚಲೀಪಟ್ಟಂನಿಂದ ಯಶವಂತಪುರದವರೆಗೂ ಸಿಸಿಟಿವಿ ಹುಡುಕಾಡಿದ್ರೂ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ
Advertisement
Advertisement
ಮಹಿಳೆಯ ಮೃತದೇಹದ ಗುರುತು ಪತ್ತೆ ಆಗದೆ ಇರೋದು ಹಂತಕರನ್ನು ಪತ್ತೆ ಮಾಡಲು ಸಾಧ್ಯವಾಗ್ತಿಲ್ಲ. ಕೊಲೆಯಾಗಿ 10 ದಿನಗಳ ಬಳಿಕ ರೈಲ್ವೇ ಪೊಲೀಸರಿಗೆ ಮೃತದೇಹ ಸಿಕ್ಕಿದ್ದು, ಮುಖ ಕೊಳೆತ ಸ್ಥಿತಿಯಲ್ಲಿತ್ತು, ಹೀಗಾಗಿ ಆರೋಪಿಗಳ ಜೊತೆ ಸತ್ತವಳು ಸಹ ಯಾರು ಅಂತಾ ಗೊತ್ತಾಗ್ತಿಲ್ಲ ಅಂತಿದ್ದಾರೆ ಪೊಲೀಸ್ರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k