ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನವಾಣೆಯ ಬಳಿಕ ಡೀಸೆಲ್ ಬೆಲೆ ಏರುತ್ತಿದ್ದಂತೆ ಈಗ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಹೌದು. ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಸಾರಿಗೆ ಇಲಾಖೆ ಬಸ್ ಟಿಕೆಟ್ ದರವನ್ನು ಸದ್ಯದಲ್ಲೇ ಏರಿಸಲಿದೆ. ಈಗಾಗಲೇ ನಾಲ್ಕು ನಿಗಮಗಳ ದರ ಏರಿಕೆಗೆ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
Advertisement
ಸಾರಿಗೆ ಇಲಾಖೆ ಮೂರುವರೆ ವರ್ಷಗಳ ಹಿಂದೆ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿತ್ತು. ಈಗ ಸಾರಿಗೆ ಇಲಾಖೆ 65 ರೂಪಾಯಿಗೆ ಹೋಲ್ ಸೇಲ್ ದರದಲ್ಲಿ ಪ್ರತಿ ಲೀಟರ್ ಡೀಸೆಲ್ ಪಡೆಯುತ್ತಿದೆ. ಆಗುತ್ತಿರುವ ನಷ್ಟವನ್ನು ಸರಿದೂಗಿಸಲು 8% ದಿಂದ 10% ದರ ಏರಿಸಲು ಸಾರಿಗೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
Advertisement
ನೂತನ ಸಾರಿಗೆ ಸಚಿವರು ನೇಮಕವಾದ ಬಳಿಕ ಅವರೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧಾರ ಮಾಡಿದೆ ಎಂದು ಸಾರಿಗೆ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಕೆಲ ತಿಂಗಳಿಂದ ಡೀಸೆಲ್ ದರ ಹೆಚ್ಚಾಗುತ್ತಿದೆ. ಏಪ್ರಿಲ್ ನಲ್ಲಿ ಲೀಟರ್ ಗೆ 61.02 ರೂ. ಇತ್ತು. ಆದರೆ ಮೇ ತಿಂಗಳಲ್ಲಿ 70.25 ರೂ. ಗೆ ಏರಿಕೆ ಆಗಿದೆ.
Advertisement
ಡೀಸೆಲ್ ಏರಿಕೆಯಿಂದ ದಿನಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಉಪಯೋಗಿಸುವ ಸಾರಿಗೆ ನಿಗಮಗಳು ಈಗ ಡೀಸೆಲ್ ಗಾಗಿ ಅಧಿಕ ಹಣ ಪಾವತಿಸುತ್ತಿದೆ. ಮೊದಲೇ ಸಾರಿಗೆ ನಿಮಗ ನಷ್ಟದಲ್ಲಿರುವುದರಿಂದ ಈಗ ಟಿಕೆಟ್ ಬೆಲೆ ಏರಿಕೆ ಅನಿವಾರ್ಯವಾಗಿದೆ.
Advertisement
ಅಷ್ಟೇ ಅಲ್ಲದೆ ತೈಲ ಕಂಪೆನಿಗಳು ಸಗಟು ಡೀಸೆಲ್ ಬೆರೆಯನ್ನು ಏರಿಕೆ ಮಾಡಿವೆ. ಆದ್ದರಿಂದ ಸಾರಿಗೆ ನಿಗಮಗಳಿಗೆ ಪ್ರತಿದಿನ 30.97 ಲಕ್ಷ ರೂ. ಅಧಿಕವಾಗಿ ಆರ್ಥಿಕ ಹೊರೆ ಬೀಳುತ್ತಿದ್ದು, ತಿಂಗಳಿಗೆ 9.29 ಕೋಟಿ ರೂ. ಅಧಿಕ ವೆಚ್ಚವಾಗುತ್ತಿದೆ.