ಬೆಂಗಳೂರು: ಬೈಕ್ ಟ್ಯಾಕ್ಸಿ (Bike Taxi) ಸೇವೆ ಪುನರ್ ಸ್ಥಾಪನೆ ಬಗ್ಗೆ ಹೈಕೋರ್ಟ್ (High Court) ಆದೇಶವನ್ನ ಸರ್ಕಾರ ಪಾಲನೆ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸದಸ್ಯ ಡಿ.ಎಸ್. ಅರುಣ್ ಬೈಕ್ ಟ್ಯಾಕ್ಸಿ ಸ್ಥಗಿತ ಮಾಡಿರೋ ಬಗ್ಗೆ ಪ್ರಶ್ನೆ ಕೇಳಿದರು. ಬೆಂಗಳೂರಿನಲ್ಲಿ ರ‍್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ ಮಾಡಲಾಗಿದೆ. ಸರ್ಕಾರದ ಕ್ರಮ ಸರಿಯಲ್ಲ. ಬೈಕ್ ಟ್ಯಾಕ್ಸಿಯಿಂದ ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತಿದೆ. ಬೈಕ್ ಟ್ಯಾಕ್ಸಿಯಿಂದ ಜನರಿಗೆ ಅನುಕೂಲ ಆಗುತ್ತಿದೆ. ಕೋರ್ಟ್ ಆದೇಶ ಮಾಡಿದೆ ಅಂತ ತಡೆ ಹಿಡಿಯೋದು ಸರಿಯಲ್ಲ. ಕೋರ್ಟ್ಗೆ ಮಾಹಿತಿ ಕೊಡಬೇಕು. ಬೈಕ್ ಟ್ಯಾಕ್ಸಿ ನಿಲ್ಲಿಸಿರುವುದರಿಂದ ಸಮಸ್ಯೆ ಆಗುತ್ತಿದೆ. 8 ಲಕ್ಷ ಜನರು ಗಿಗ್ ವರ್ಕರ್ ಇದ್ದಾರೆ. ಬೈಕ್ ಟ್ಯಾಕ್ಸಿ ಮತ್ತೆ ಪ್ರಾರಂಭ ಮಾಡಿ ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಧರ್ಮಸ್ಥಳ ವಿಚಾರದಲ್ಲಿ ವರಸೆ ಬದಲಿಸಿದ ಸಿಎಂ – ಜೋಶಿ ಆರೋಪ
ಇದಕ್ಕೆ ಉತ್ತರಿಸಿದ ರಾಮಲಿಂಗಾ ರೆಡ್ಡಿ, 2018ರಲ್ಲಿ ಬೈಕ್ ಟ್ಯಾಕ್ಸಿ ಸಾಧಕಬಾಧಕದ ಬಗ್ಗೆ ಚರ್ಚೆ ಆಯಿತು. 2019ರಲ್ಲಿ ಬೈಕ್ ಟ್ಯಾಕ್ಸಿ ಯೋಜನೆ ಬೇಡ ಅಂತ ಮೆಟ್ರೋ ಎಂಡಿ ನೇತೃತ್ವದ ಸಮತಿ ವರದಿ ಕೊಟ್ಟಿದ್ದರು. ಆದರೂ 2021ರಲ್ಲಿ ಬ್ಯಾಟರಿ ವಾಹನಕ್ಕೆ ಅವಕಾಶ ಕೊಡಲಾಗಿತ್ತು. ಆದರೆ ಈಗ ಈ ಸೇವೆ ಕೊಡೋ ಕಂಪನಿಗಳು ನಿಯಮ ಉಲ್ಲಂಘನೆ ಮಾಡಲಾಗಿದೆ. ಅದಕ್ಕೆ ಸ್ಥಗಿತ ಮಾಡಲಾಗಿದೆ. ಬೈಕ್ ಟ್ಯಾಕ್ಸಿ ವಿಚಾರ ಕೋರ್ಟ್ನಲ್ಲಿ ಇದೆ. ಕೆಲವೇ ದಿನಗಳಲ್ಲಿ ತೀರ್ಪು ಬರುತ್ತದೆ. ಕೋರ್ಟ್ ಆದೇಶದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋರನ್ನ ಗುಂಡಿಕ್ಕಿ ಕೊಲ್ಲಿ: ರೇಣುಕಾಚಾರ್ಯ