ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆಯ ‘ಮ್ಯಾಕ್ಸ್’ (Max Film) ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಂತೂ ಇಂತೂ ಕಿಚ್ಚನ ಅಭಿಮಾನಿಗಳ ಕಾತರಕ್ಕೆ ಉತ್ತರ ಸಿಕ್ಕಿದೆ. ಇದೇ ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಅಬ್ಬರ ಶುರುವಾಗಲಿದೆ. ಇದನ್ನೂ ಓದಿ:ಇಬ್ಭಾಗವಾಯ್ತು ದೊಡ್ಮನೆ- ಅಧಿಕಾರಕ್ಕಾಗಿ ಯುವರಾಣಿ ಮೋಕ್ಷಿತಾ, ಮಂಜು ನಡುವೆ ಬಿಗ್ ಫೈಟ್
ಕಾರಣಾಂತಗಳಿಂದ ‘ಮ್ಯಾಕ್ಸ್’ ಸಿನಿಮಾದ ರಿಲೀಸ್‌ಗೆ ತಡವಾಗಿತ್ತು. ಇದೀಗ ಸುದೀಪ್ ಫ್ಯಾನ್ಸ್ ಚಿತ್ರತಂಡ ಸಿಹಿಸುದ್ದಿ ಕೊಟ್ಟಿದೆ. ಇದೇ ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಚಿತ್ರ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕ್ರಿಸ್‌ಮಸ್ ಹಬ್ಬದ ವೇಳೆ, ಥಿಯೇಟರ್‌ಗೆ ಸಿನಿಮಾ ಲಗ್ಗೆ ಇಡುತ್ತಿದೆ.
ಈ ಚಿತ್ರದಲ್ಲಿ ಸುದೀಪ್ ಜೊತೆ ‘ಬಿಗ್ ಬಾಸ್’ ಉಗ್ರಂ ಮಂಜು(Ugramm Manju), ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ವರಲಕ್ಷ್ಮಿ ಶರತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.