ಬೆಂಗಳೂರು: ಬೆಳಗ್ಗಿನ ಚಳಿಚಳಿಯ ವಾತಾವರಣಕ್ಕೆ ಬಿಸಿಯ ಮುದ ಕೊಡುವುದು ಟೀ. ಕೆಲಸದ ಒತ್ತಡದಲ್ಲಿ ರಿಲ್ಯಾಕ್ಸ್ ಆಗುವುದಕ್ಕೂ ಅದೇ ಟೀ ಬೇಕು. ಮನೆಗೆ ಯಾರಾದರೂ ಗೆಸ್ಟ್ ಬಂದರೆ ಬಹುತೇಕರ ಮನೆಯಲ್ಲಿ ಮೊದಲು ಮಾಡುವುದು ಟೀಯನ್ನು. ಇಷ್ಟೆಲ್ಲ ಉಪಯೋಗಿ ಚಹಾಗೂ ಒಂದು ಇತಿಹಾಸ ಇದೆ.
ಇಂದು ಅಂತರಾಷ್ಟ್ರೀಯ ಚಹಾ ದಿನ. ಪ್ರತಿ ವರ್ಷ ಡಿಸೆಂಬರ್ 15ರಂದು ಅಂತರಾಷ್ಟ್ರೀಯ ಚಹಾ ದಿನವಾಗಿ ಆಚರಿಸುತ್ತಾರೆ. ಹಾಗಾಗಿ ನೀವು ಕೂಡ ಇಂದು ಒಂದು ಕಪ್ ಜಾಸ್ತಿ ಕುಡಿದು ಅಂತರಾಷ್ಟ್ರೀಯ ಚಹಾ ದಿನ ಆಚರಿಸಿ.
Advertisement
Advertisement
ಅಂತರಾಷ್ಟ್ರೀಯ ಚಹಾ ದಿನದ ಇತಿಹಾಸ:
2005ರಲ್ಲಿ ಏಷ್ಯಾ ಮತ್ತು ಆಫ್ರಿಕಾದ ಚಹಾ ಉದ್ಯಮದ ಕಾರ್ಮಿಕ ಸಂಘಟನೆಗಳು, ಸಣ್ಣಸಣ್ಣ ಬೆಳಗಾರರು ಈ ಅಂತರಾಷ್ಟ್ರೀಯ ಚಹಾ ದಿನವನ್ನು ಪ್ರಾರಂಭ ಮಾಡಿದ್ದರು. ಕಾಲಕ್ರಮೇಣ ವಿಶ್ವದಾದ್ಯಂತ ಈ ಚಹಾ ದಿನ ಪ್ರಸಿದ್ಧಿ ಆಯಿತು. ಚಹಾ ಉದ್ಯಮದ ಅಭಿವೃದ್ಧಿ, ಸವಾಲುಗಳು, ಸಮಸ್ಯೆಗಳು, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಅಗತ್ಯ ವೇದಿಕೆ ಕಲ್ಪಿಸುವುದು ಈ ದಿನದ ವಿಶೇಷ.
Advertisement
ಭಾರತವು ಕೂಡ ಅತಿ ಹೆಚ್ಚು ಚಹಾ ಉತ್ಪಾದನೆ ಮಾಡುವ ರಾಷ್ಟ್ರಗಳಲ್ಲಿ ಒಂದು. ಹೀಗಾಗಿ ನಮ್ಮ ಭಾರತದಲ್ಲೂ ಚಹಾ ದಿನವನ್ನು ಆಚರಿಸುತ್ತಾರೆ. ಈ ದಿನವನ್ನು ರಜಾ ದಿನ ಎಂದು ಘೋಷಣೆ ಮಾಡಬೇಕು ಎನ್ನುವ ಕೂಗುಗಳು ಕೇಳಿ ಬರುತ್ತಿವೆ. ಭಾರತ, ಕೆನಡಾ, ಅಮೆರಿಕ, ಚೀನಾ, ಜಪಾನ್, ಕಿನ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಚಹಾ ದಿನವನ್ನು ರಜಾ ದಿನ ಎಂದು ಘೋಷಣೆ ಮಾಡಬೇಕು ಎನ್ನುವ ಕೂಗಿಗೆ ಬೆಂಬಲ ವ್ಯಕ್ತಪಡಿಸಿವೆ. ಆದರೆ ಅಧಿಕೃತವಾಗಿ ಮಾತ್ರ ರಜೆ ದಿನ ಘೋಷಣೆ ಆಗಿಲ್ಲ. ಹೀಗಾಗಿ ಈ ದಿನವನ್ನ ವಿಶೇಷ ಕಾರ್ಯಗಾರಗಳು, ತಂತ್ರಜ್ಞಾನ ಬಳಕೆ ಸೇರಿದಂತೆ ಹಲವು ವಿಚಾರಗಳ ಪ್ರಸ್ತಾಪಗಳಿಗೆ ಸಮಾವೇಶ ಏರ್ಪಡಿಸಲಾಗುತ್ತೆ.