ನಟಿ ರಶ್ಮಿಗೆ ನಾನಾ ರೀತಿಯಲ್ಲಿ ಕೊಲೆ ಬೆದರಿಕೆ : ದೂರು ನೀಡಲು ಚಿಂತನೆ

Public TV
1 Min Read
Rashmi Gautam 4

ತೆಲುಗು ಸಿನಿಮಾ ರಂಗದ ಹೆಸರಾಂತ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದಿಲ್ಲೊಂದು ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದವರು, ಇದ್ದಕ್ಕಿದ್ದಂತೆ ಆಘಾತ ಮೂಡಿಸುವಂತಹ ಪೋಸ್ಟ್ ವೊಂದನ್ನು ಹಾಕಿದ್ದಾರೆ. ಇಂತಹ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿರುವ ಕುರಿತು ಅವರು ಕಳವಳ ವ್ಯಕ್ತ ಪಡಿಸಿದ್ದಾರೆ.

Rashmi Gautam 3

ತೆಲುಗು ಚಿತ್ರರಂಗದಲ್ಲಿ ರಶ್ಮಿಗೆ ಸಾಕಷ್ಟು ಬೇಡಿಕೆಯಿದೆ. ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಎನ್ನುವ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಈ ನಟಿಯನ್ನು ಫಾಲೋ ಮಾಡುತ್ತಾರೆ. ಅದೇ ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಆಸಿಡ್ ಹಾಕುವ ಹಾಗೂ ಕಾರಿನಿಂದ ಗುದ್ದಿಸಿ ಸಾಯಿಸುವ ಕುರಿತು ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಅನ್ನು ಅವರು ಶೇರ್ ಮಾಡಿದ್ದಾರೆ. ಇದನ್ನೂ ಓದಿ: KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

Rashmi Gautam 2

ಈ ಹಿಂದೆ ಕೆಲವರು ನನ್ನ ಮದುವೆ ಬಗ್ಗೆ ಕಾಳಜಿ ತೋರುತ್ತಿದ್ದರು. ಬೇಗ ಮದುವೆ ಆಗು ಎನ್ನುತ್ತಿದ್ದರು. ಇದೀಗ ಆಸಿಡ್ ಹಾಕುವುದಾಗಿ, ಆಕ್ಸಿಡೆಂಟ್ ಮಾಡಿಸಿ ಸಾಯಿಸುವುದಾಗಿ ಹೇಳುತ್ತಿದ್ದಾರೆ. ಇಂಥವರಿಗೆ ಏನು ಮಾಡೋದು? ದೂರು ಕೊಡಲೆ? ಎಂದು ಅದೇ ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಈ ರೀತಿಯ ಬೆದರಿಕೆಗಳನ್ನು ಗಂಭೀರವಾಗಿ ತಗೆದುಕೊಳ್ಳಬೇಕೋ? ಅಥವಾ ಸುಮ್ಮನೆ ಇದ್ದುಬಿಡಬೇಕು ಎನ್ನುವ ಗೊಂದಲವನ್ನೂ ಅವರು ವ್ಯಕ್ತ ಪಡಿಸಿದ್ದಾರೆ.

Rashmi Gautam 1

ಈ ರೀತಿಯಲ್ಲಿ ವ್ಯಕ್ತಿಗಳು ಕಾಮೆಂಟ್ ಮಾಡುವುದಕ್ಕೆ ಕಾರಣ ಏನು ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಕಾಮೆಂಟ್ ಮಾಡಿದವರು ಸ್ಕ್ರೀನ್ ಶಾಟ್ ತಗೆದು ಅದನ್ನು ಅವರು ಪೋಸ್ಟ್ ಮಾಡಿದ್ದಾರೆ. ಒಂದು ಪೋಸ್ಟ್ ನಲ್ಲಿ ನಿನಗೆ ವಯಸ್ಸಾಗುತ್ತಿದೆ, ಬೇಗ ಮದುವೆಯಾಗು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿನ್ನ ಪಾಡಿಗೆ ನೀನು ಇರು. ಇಷ್ಟಬಂದಂತೆ ವರ್ತಿಸಬೇಡ ಎಂದಿದೆ.

Share This Article