ಇಂದೋರ್: 4 ವರ್ಷದ ಹೆಣ್ಣು ಮಗುವಿನ ಮೇಲೆ ದೌರ್ಜನ್ಯ ಎಸಗಿ, ಕೊಲೆ ಮಾಡಿದವನಿಗೆ ಜಿಲ್ಲಾ ಮಧ್ಯಪ್ರದೇಶದ ಇಂದೋರ್ ನ್ಯಾಯಾಲಯ ಮರಣ ದಂಡನೆಯನ್ನು ವಿಧಿಸಿದೆ.
ರಕ್ತ ಸೋರುತ್ತಿದ್ದ 4 ವರ್ಷದ ಮಗುವಿನ ದೇಹವನ್ನು ರಾಜ್ವಾಡಾ ಪ್ರದೇಶದ ಕೋಟೆಯ ಬಳಿ ಇರುವ ಕಟ್ಟಡದ ನೆಲಮಹಡಿಯಿಂದ ಏಪ್ರಿಲ್ 20 ರಂದು ಹೊರತೆಗೆಯಲಾಯಿತು. ಅಪರಾಧ ಎಸಗಿರುವ ವ್ಯಕ್ತಿ ಮಗುವಿನ ಚಿಕ್ಕಪ್ಪ ಎಂದು ಸಿಸಿ ಟಿವಿ ದೃಶ್ಯಾವಳಿಗಳಿಂದ ಪೊಲೀಸರ ಗಮನಕ್ಕೆ ಬಂದಿತ್ತು.
Advertisement
ಪೊಕ್ಸೊ ಜೊತೆ ಬಹಳಷ್ಟು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ ದೋಷಿ ಎಂದು ತೀರ್ಪು ನೀಡಿ ಮರಣದಂಡನೆ ಶಿಕ್ಷೆ ವಿಧಿಸಿದೆ.
Advertisement
ಪೋಷಕರ ಜೊತೆ ಮಗು ಮಲಗಿತ್ತು. ಅಪರಾಧಿ ಕೂಡ ಹತ್ತಿರದಲ್ಲೇ ಮಲಗಿದ್ದ. ಬೆಳಗಿನ ಜಾವ ಸುಮಾರು 4:45 ಕ್ಕೆ ಮಗುವನ್ನು ನೆಲಮಹಡಿಗೆ ತಗೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ.