ರಾಯಚೂರು: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ (Drinking Water Tank) ಮಂಗಗಳು (Monkeys) ಸತ್ತು ಬಿದ್ದಿದ್ದು 3 ದಿನಗಳ ಕಾಲ ತಿಳಿಯದೇ ಅದೇ ನೀರನ್ನು ಗ್ರಾಮಸ್ಥರು ಕುಡಿದಿರುವ ಘಟನೆ ರಾಯಚೂರಿನ (Raichur) ದೇವದುರ್ಗ ತಾಲೂಕಿನ ಖಾನಾಪುರದಲ್ಲಿ ನಡೆದಿದೆ.
ತೆರೆದ ವಾಟರ್ ಟ್ಯಾಂಕ್‌ನಲ್ಲಿ ನೀರು ಕುಡಿಯಲು ಹೋಗಿ 2 ಮಂಗಗಳು ಮೃತಪಟ್ಟಿವೆ. ಟ್ಯಾಂಕ್ ಒಳಗೆ ಇಳಿದ ಮಂಗಗಳು ಮೇಲೆ ಬರಲು ದಾರಿ ಕಾಣದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.
Advertisement
Advertisement
ಇದೇ ಟ್ಯಾಂಕ್‌ನಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಮಂಗಳವಾರ ಟ್ಯಾಂಕ್ ಸ್ವಚ್ಛಗೊಳಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಟ್ಯಾಂಕ್ ಸ್ವಚ್ಛಗೊಳಿಸಲು ಹೋದವರು ಮುಚ್ಚಳ ಮುಚ್ಚದೇ ಬಂದಿದ್ದರಿಂದ ಮಂಗಗಳು ಅದರಲ್ಲಿ ಮುಳುಗಿ ಸಾವನ್ನಪ್ಪಿವೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
Advertisement
Advertisement
ಯಮನಾಳ ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾನಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಸರಿಯಾದ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ಯಾಂಕ್‌ನಲ್ಲಿ ಮಂಗಗಳು ಸತ್ತು ಬಿದ್ದಿರುವ ವಿಷಯ ತಿಳಿದು ಕೆಲವರಿಗೆ ಹೊಟ್ಟೆ ತೊಳಸಿದಂತಾಗಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ 17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!
Web Stories