CrimeDistrictsKarnatakaKodaguLatestMain PostSports

ಮೈದಾನದಲ್ಲೇ ಹಾಕಿ ಆಟಗಾರ ಸಾವು

ಮಡಿಕೇರಿ: ಹಾಕಿ ಪಂದ್ಯಾಟ ಆಡುತ್ತಿರುವಾಗಲೇ ಆಟಗಾರ ಹೃದಯಾಘಾತದಿಂದ ಮೃತಪಟ್ಟಿರುವ ವಿದ್ರಾವಕ ಘಟನೆ ಕೊಡಗಿನ ಮೂರ್ನಾಡುವಿನಲ್ಲಿ ನಡೆದಿದೆ.

ಸೋಮಯ್ಯ (22) ಹೃದಯಾಘಾತದಿಂದ ಮೃತಪಟ್ಟ ಹಾಕಿ ಆಟಗಾರ. ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೊಡವ ಹಾಕಿ ಪಂದಾಟ ನಡೆಯುತ್ತಿತ್ತು. ಪಂದ್ಯಾಟ ಆಡುತ್ತಿರುವಾಗಲೇ ಸೋಮಯ್ಯಗೆ ಹೃದಯಘಾತವಾಗಿದ್ದು, ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.  ಇದನ್ನೂ ಓದಿ: ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ವೈದ್ಯನಿಗೆ ಓಮಿಕ್ರಾನ್

ಕೂಡಲೇ ಎಚ್ಚೆತ್ತುಕೊಂಡ ಆಯೋಜಕರು, ಸೋಮಯ್ಯ ಅವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ಸೋಮಯ್ಯ ಉಸಿರು ನಿಲ್ಲಿಸಿದ್ದಾರೆ. ಆರೋಗ್ಯದಾಯಕವಾಗಿದ್ದ ಸೋಮಯ್ಯ ಪಂದ್ಯಾಟ ಆಡುವಾಗಲೇ ಕುಸಿದು ಮೃತಪಟ್ಟಿರುವುದು ಉಳಿದ ಹಾಕಿ ಆಟಗಾರರು ಮತ್ತು ನೆರೆದ ಕ್ರೀಡಾಪ್ರೇಮಿಗಳು ಶಾಕ್ ಆಗಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಸರಣಿ ಸರಕಳ್ಳತನ – ತಾಯಿ, ಮಗಳು ಬಂಧನ

Leave a Reply

Your email address will not be published.

Back to top button