BellaryCrimeDistrictsKarnatakaLatestMain Post

ಬಳ್ಳಾರಿಯಲ್ಲಿ ಸರಣಿ ಸರಕಳ್ಳತನ – ತಾಯಿ, ಮಗಳು ಬಂಧನ

ಬಳ್ಳಾರಿ: ಜಿಲ್ಲೆಯ ಸೂಪರ್ ಮಾರ್ಕೆಟ್ ಒಂದರಲ್ಲಿ ಸರಕಳ್ಳತನ ಮಾಡುತ್ತಿದ್ದ ಘಟನೆ ಸಿಸಿಟಿವಿಯ ಮೂಲಕ ಬೆಳಕಿಗೆ ಬಂದಿದೆ.

ಬಳ್ಳಾರಿ ನಗರದ ನಾನಾ ಪ್ರದೇಶಗಳಲ್ಲಿ ತಾಯಿ ಮಗಳು ಕಳ್ಳತನ ಮಾಡುತ್ತಿದ್ದರು. ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಗಾದೆ ಮಾತಿನಂತೆ ಕಳ್ಳರು ಸೂಪರ್ ಮಾರ್ಕೆಟ್ ನುಗ್ಗಿ ಅಲ್ಲಿಯೂ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಬಳಿಕ ನಿನ್ನೆ ಜಿಲ್ಲೆಯ ಎಸ್‌ಎನ್ ಪೇಟೆಯ ಸೆವೆನ್ ಹಿಲ್ಸ್ ಅಂಗಡಿಯಲ್ಲು ದಿನಸಿ ವಸ್ತುಗಳನ್ನು ಕದಿಯಲು ಮುಂದಾಗಿದ್ದು, ಈ ವೇಳೆ ತಾಯಿ ಮಗಳು ಅಂಗಡಿಯ ಮಾಲೀಕರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ಕೆಎಸ್‌ಆರ್‌ಟಿಸಿ ಚಾಲಕ, ಕಂಡಕ್ಟರ್ ಮೇಲೆ ಹಲ್ಲೆ!

ಕಳ್ಳರನ್ನು ಹಿಡಿದ ಅಂಗಡಿ ಮಾಲೀಕರು ಗಾಂಧಿನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ಕುರಿತು ತಾಯಿ ಮಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button