ಬೀಜಿಂಗ್: ದಕ್ಷಿಣ ಚೀನಾದ (China) ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿತದಿಂದ (China Highway Collapse) 48 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರೀ ಮಳೆಯಿಂದಾಗಿ ಮೀಝೌ ನಗರದಿಂದ ಡಾಬು ಕೌಂಟಿಯ ಕಡೆಗೆ ಚಲಿಸುವ ರಸ್ತೆಯು ಕುಸಿತ ಕಂಡಿದೆ. ವಾಹನಗಳು ಟಾರ್ಮ್ಯಾಕ್ನಲ್ಲಿ ಸುಮಾರು 18 ಮೀಟರ್ ಉದ್ದದ (59-ಅಡಿ) ಗಾಶ್ಗೆ ಸಿಲುಕಿ, ಕಡಿದಾದ ಇಳಿಜಾರಿನಲ್ಲಿ ಕೆಳಗೆ ಬಿದ್ದವು. ಇದನ್ನೂ ಓದಿ: 7 ವರ್ಷದ ಮಗುವಿಗೆ ಕಚ್ಚಿದ್ದಕ್ಕೆ ಸಾಕು ನಾಯಿಯನ್ನೇ ಕೊಂದು ತಿಂದ!
Advertisement
Advertisement
ದಟ್ಟವಾದ ಜನನಿಬಿಡ ಕೈಗಾರಿಕಾ ಶಕ್ತಿ ಕೇಂದ್ರವಾದ ಗುವಾಂಗ್ಡಾಂಗ್, ಇತ್ತೀಚಿನ ವಾರಗಳಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಸಂಭವಿಸಿದ ವಿಪತ್ತುಗಳ ಸರಮಾಲೆಯಿಂದ ಹಾನಿಗೊಳಗಾಗಿದೆ.
Advertisement
ಚಂಡಮಾರುತಗಳು ವರ್ಷದಲ್ಲಿ ನಿರೀಕ್ಷೆಗಿಂತ ಹೆಚ್ಚು ಭಾರೀ ಪ್ರಮಾಣದಲ್ಲಾಗಿವೆ. ಹವಾಮಾನ ಬದಲಾವಣೆಗೆ ಸಂಭವಿಸುತ್ತಿವೆ. ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಹಸಿರುಮನೆ ಅನಿಲಗಳ ಅತಿದೊಡ್ಡ ಹೊರಸೂಸುವಿಕೆ ದೇಶ ಚೀನಾ. 2060 ರ ವೇಳೆಗೆ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತಗ್ಗಿಸಲು ರಾಷ್ಟ್ರ ಪ್ರತಿಜ್ಞೆ ಮಾಡಿದೆ. ಇದನ್ನೂ ಓದಿ: ಯುಎಇನಲ್ಲಿ ಮತ್ತೆ ಭಾರೀ ಮಳೆ – ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ
Advertisement
ಗುರುವಾರ ಬೆಳಗ್ಗೆ ಹೆದ್ದಾರಿ ಕುಸಿತದಿಂದ 36 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮೃತರ ಸಂಖ್ಯೆ 48 ಕ್ಕೆ ಏರಿದೆ.