ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಿಪ್‍ಲಾಕ್- ಡಿಯರ್ ಕಾಮ್ರೆಡ್ ಟೀಸರ್ ನಲ್ಲಿ ರಶ್ಮಿಕಾ ಫುಲ್ ಬೋಲ್ಡ್

1 Min Read

ಬೆಂಗಳೂರು: ವಿಜಯ್ ದೇವರಕೊಂಡ ಮತ್ತು ಕನ್ನಡದ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರದ ಕನ್ನಡ ಟೀಸರ್ ರಿಲೀಸ್ ಆಗಿದೆ. ಟೀಸರ್ 1 ನಿಮಿಷ 7 ಸೆಕೆಂಡ್ ಅವಧಿಯ ಟೀಸರ್ ಇದಾಗಿದ್ದು, ರಶ್ಮಿಕಾ ಫುಲ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸಿದ್ದಾರೆ.

ಎಂದಿನಂತೆ ಟೀಸರ್ ನಲ್ಲಿ ಮಾಸ್ ಆ್ಯಂಡ್ ರೊಮ್ಯಾಂಟಿಕ್ ಎರಡು ಶೇಡ್ ಗಳಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಶ್ಮಿಕಾ ಮತ್ತು ವಿಜಯ್ ನಟಿಸಿದ್ದ ‘ಗೀತಾ ಗೋವಿಂದಂ’ ಸೂಪರ್ ಹಿಟ್ ಆಗಿತ್ತು. ಗೀತಾ ಗೋವಿಂದಂ ಸಿನಿಮಾದ ಕಿಸ್ಸಿಂಗ್ ಸೀನ್ ಕ್ಲಿಪ್ ಚಿತ್ರ ಬಿಡುಗಡೆ ಮುನ್ನವೇ ಲೀಕ್ ಆಗಿತ್ತು. ಆದ್ರೆ ಸಿನಿಮಾದಲ್ಲಿ ಚುಂಬನ ದೃಶ್ಯ ಕ್ಕೆ ಕತ್ತರಿ ಹಾಕಲಾಗಿತ್ತು. ಇದೀಗ ಟೀಸರ್ ನಲ್ಲಿ ಚುಂಬನ ದೃಶ್ಯವನ್ನು ‘ಡಿಯರ್ ಕಾಮ್ರೆಡ್’ ಚಿತ್ರತಂಡ ತೋರಿಸಿದೆ. ಕಡಲಂತೆ ಕಾದ ಕಣ್ಣು, ನದಿಯಂತೆ ಓಡುವ ಮನಸ್ಸು ಸಾಲುಗಳ ಹಾಡಿನ ಮೂಲಕ ಆರಂಭವಾಗುವ ಟೀಸರ್ ನೋಡುಗರನ್ನು ಸೆಳೆಯುತ್ತಿದೆ.

ಭರತ್ ಕಾಮಾ ನಿದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು.

https://www.youtube.com/watch?v=z9uAL7o5jq0

Share This Article
Leave a Comment

Leave a Reply

Your email address will not be published. Required fields are marked *