ಜೋಹನ್ಸ್ ಬರ್ಗ್: ಕ್ರಿಕೆಟ್ ನಲ್ಲಿ ಹಲವರು ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಕೆಲವು ಸಾಮಾನ್ಯ ಕ್ಯಾಚ್ ಗಳಾದರೆ ಕೆಲವು ಮರೆಯಲಾಗದಂತಹವು. ಇಂತಹದ್ದೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಆಸೀಸ್ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ದಾಖಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೋಹನ್ಸ್ ಬರ್ಗ್ ನಡೆಯುತ್ತಿರುವ ನಾಲ್ಕು ಮತ್ತು ಕೊನೆಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾದ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಪಡೆದ ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ.
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 488 ರನ್ ಗಳಿದ ವೇಳೆ ಅಲೌಟ್ ಆಗಿತ್ತು, ಬಳಿಕ ಆಸ್ಟ್ರೇಲಿಯಾ 288 ರನ್ ಗಳಿಗೆ 9 ವಿಕೆಟ್ ಕಳೆದು ಕೊಂಡಿತ್ತು. ಈ ವೇಳೆ ಅಸೀಸ್ ನಾಯಕ ಟೀಮ್ ಪೈನೆ (62), ರಬಡ ಬೌಲಿಂಗ್ ವೇಳೆ ಸಿಡಿಸಿದ ಚೆಂಡನ್ನು ಎಲ್ಗರ್ ಚಿರತೆಯಂತೆ ಜಂಪ್ ಮಾಡಿ ಕ್ಯಾಚ್ ಪಡೆದರು.
ಇದೇ ವೇಳೆ ವಿಕ್ಷಕ ವಿವರಣೆ ನೀಡುತ್ತಿದ್ದ ಆಫ್ರಿಕಾ ತಂಡದ ಮಾಜಿ ಸ್ಮಿತ್ ಸಹ ಅಚ್ಚರಿಗೊಂಡರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
https://www.youtube.com/watch?v=iM_dQb-q_9U&utm_source=inshorts&utm_medium=referral&utm_campaign=fullarticle
Dean Elgar is allowed to drop as many as he wants cause that catch was absolutely AMAZING
— simmi (@simmiareff) April 1, 2018
I reckon Dean Elgar just took catch of the century! #SAvsAUS pic.twitter.com/dk9BtXRbmW
— Corey Norris (@coreynorris9) April 1, 2018