ಬೆಂಗಳೂರು: ಬ್ಲೂ ವೇಲ್ ಗೇಮ್ ಆಡಿ ವಿಶ್ವಾದ್ಯಂತ ಸಾಕಷ್ಟು ಯುವಜನತೆ ಆತ್ಮಹತ್ಯೆ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಗೇಮ್ ಈಗ ಗಾಂಧಿನಗರದಲ್ಲೂ ಕಾಲಿಟ್ಟಿದೆ. ಅರೆ ಕನ್ ಫ್ಯೂಸ್ ಆಗಬೇಡಿ. ಬ್ಲೂ ವೇಲ್ ಬಗ್ಗೆ ಕನ್ನಡದಲ್ಲಿ ಸಿನಿಮಾವನ್ನು ಮಾಡಲು ಚಿತ್ರತಂಡ ಮುಂದಾಗಿದೆ.
ಹೌದು. ಈಗಿನ ತಂತ್ರಜ್ಞಾನದಿಂದ ತಯಾರಾದ ಈ ಡೆಡ್ಲಿ ಗೇಮ್ ಸಾಕಷ್ಟು ಯುವಕರ ಪ್ರಾಣವನ್ನು ಬಲಿ ಪಡೆದಿದೆ. ಭಾರತದಲ್ಲಿ ಕೂಡ ಹೆಚ್ಚು ಸುದ್ದಿ ಮಾಡಿದ ಬ್ಲೂ ವೇಲ್ ಗೇಮ್ ಬಗ್ಗೆ ಸಿನಿಮಾ ಮೂಡಿಬರಲಿದ್ದು, ಕೆಲವು ದಿನಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ.
Advertisement
ಈ ಹಿಂದೆ ಬಿಡುಗಡೆಯಾದ ‘ಲೂಸ್ ಗಳು’ ಚಿತ್ರದ ನಿರ್ದೇಶಕ ಅರುಣ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ‘ಸ್ಟೋರಿ ಆಫ್ ಟಸ್ಕರ್’ ಎಂಬ ಕಿರುಚಿತ್ರದಲ್ಲಿ ನಾಯಕನಾಗಿ ನಟಿಸಿದ ರಾಜೇಶ್ ಗಣಪತಿ ಈ ಚಿತ್ರದಲ್ಲೂ ಕೂಡ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
Advertisement
ಬ್ಲೂ ವೇಲ್ ಗೇಮ್ ನಿಂದ ಸಾಕಷ್ಟು ಯುವಜನತೆ ಪ್ರಾಣ ಕಳೆದುಕೊಂಡಿರೊದ್ರಿಂದ ಒಂದು ಒಳ್ಳೆಯ ಸಂದೇಶದೊಂದಿಗೆ ಈ ಚಿತ್ರವನ್ನು ತಯಾರಿಸಲು ಚಿತ್ರತಂಡ ಮುಂದಾಗಿದೆ. ಈ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲು ಅರುಣ್ ನಿರ್ಧರಿಸಿದ್ದಾರೆ.