ಮೊಗಾದಿಶು: ಸೊಮಾಲಿಯಾದ (Somalia) ರಾಜಧಾನಿ ಮೊಗಾದಿಶುವಿನಲ್ಲಿ (Mogadishu) ಶನಿವಾರ ಭೀಕರವಾಗಿ 2 ಕಾರು ಬಾಂಬ್‌ಗಳು ಸ್ಫೋಟಗೊಂಡಿದ್ದು (Car Bomb Blast), ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಭಾನುವಾರ ಬೆಳಗ್ಗೆ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಶಾಲೆಯೊಂದನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಮೂಲಭೂತವಾದಿ ಗುಂಪು ಅಲ್-ಶಬಾಬ್ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್-ಶಬಾಬ್ ಭಯೋತ್ಪಾದಕರು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು 2 ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವುದರಿಂದ 100ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ. 2 ಸ್ಫೋಟಗಳು ಕೇವಲ 1 ನಿಮಿಷದ ಅಂತರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹ್ಯಾಲೋವೀನ್ ಹಬ್ಬದ ಸಂಭ್ರಮ – ಸಿಯೋಲ್‌ನಲ್ಲಿ ಕಾಲ್ತುಳಿಕ್ಕೆ 150 ಮಂದಿ ಬಲಿ
Advertisement
Advertisement
2017ರಲ್ಲಿಯೂ ಇದೇ ನಗರದಲ್ಲಿ ಭೀಕರವಾದ ಸ್ಫೋಟ ಸಂಭವಿಸಿತ್ತು. ಹೊಟೇಲ್ ಒಂದರ ಹೊರಗಡೆ ಟ್ರಕ್‌ಗೆ ಬಾಂಬ್ ಅಳವಡಿಸಲಾಗಿದ್ದು, ಘಟನೆಯಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್ರನ್ನು ಪ್ರಶಂಸಿಸಿದ ಮೋದಿ