ಲಕ್ನೋ: ಮೃತಪಟ್ಟಿದ್ದಾನೆಂದು ವೈದ್ಯರು ಅಧಿಕೃತವಾಗಿ ಘೋಷಿಸಿ ಶವಗಾರದಲ್ಲಿ ಇರಿಸಿದ್ದ ವ್ಯಕ್ತಿ ಮತ್ತೆ ಬದುಕಿ ಬಂದಿರುವ ಅಚ್ಚರಿದಾಯಕ ಘಟನೆ ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆದಿದೆ.
Advertisement
ಎಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಕುಮಾರ್ (40) ಎಂಬಾತನಿಗೆ ಮೋಟಾರುಬೈಕ್‌ವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು. ಇದನ್ನೂ ಓದಿ: ರೈತರು ಸ್ಮಾರ್ಟ್‍ಫೋನ್ ಕೊಳ್ಳಲು 1500 ರೂ. ಆರ್ಥಿಕ ನೆರವು ಕೊಟ್ಟ ಸರ್ಕಾರ
Advertisement
ಮರುದಿನ ಮರಣೋತ್ತರ ಪರೀಕ್ಷೆ ನಡೆಸುವುದೆಂದು ನಿರ್ಧರಿಸಿ ವ್ಯಕ್ತಿಯ ದೇಹವನ್ನು ಪ್ಯಾಕ್ ಮಾಡಿ ಶವಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಇದಾದ ಏಳು ಗಂಟೆಯ ನಂತರ ವ್ಯಕ್ತಿಯ ದೇಹವನ್ನು ಗುರುತಿಸಿದ ಕುಟುಂಬಸ್ಥರು ಶವಪರೀಕ್ಷೆಗೆ ಒಪ್ಪಿಗೆ ಸೂಚಿಸಲು ಮುಂದಾಗಿದ್ದರು. ಈ ವೇಳೆ ಕುಮಾರ್ ಬದುಕಿದ್ದಾನೆ, ಅವನು ಕೈ-ಕಾಲುಗಳು ಅಲುಗಾಡುತ್ತಿವೆ ಎಂದು ಆತನ ಅತ್ತಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ದುಬೈನಿಂದ ಬಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮತಚಲಾಯಿಸಿ ಕನ್ನಡಾಭಿಮಾನ ಮೆರೆದ ಮಹಿಳೆ
Advertisement
Advertisement
ದೇಹದ ಮುಂದೆ ಸುತ್ತುವರಿದ ಕುಟುಂಬಸ್ಥರು, ವೈದ್ಯರು ಮತ್ತು ಪೊಲೀಸರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಕುಮಾರ್ ಬದುಕಿದ್ದಾನೆ ಎಂಬುದನ್ನು ವೈದ್ಯರು ಖಾತ್ರಿ ಪಡಿಸಿಕೊಂಡರು. ನಂತರ ಆತನನ್ನು ಮೀರತ್‌ನ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಕೊನೆಗೆ ಕುಮಾರ್‌ನ ಪರೀಕ್ಷೆ ನಡೆಸಿದ ವೈದ್ಯರು, ಕುಮಾರ್ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.