ಭೋಪಾಲ್: ವ್ಯಕ್ತಿ ಮೃತಪಟ್ಟು ಹಲವು ತಿಂಗಳೇ ಕಳೆದಿದ್ದರೂ, ನೀವು ಲಸಿಕೆ ಪಡೆದಿದ್ದೀರಿ ಎಂಬ ಸಂದೇಶ ಅವರ ಮೊಬೈಲ್‌ಗೆ ಬಂದು ಅಚ್ಚರಿ ಮೂಡಿಸಿರುವ ಘಟನೆ ಮಧ್ಯಪ್ರದೇಶದ ರಾಜ್‌ಘರ್ ಜಿಲ್ಲೆಯಲ್ಲಿ ನಡೆದಿದೆ.
ಪುರುಷೋತ್ತಮ್ ಶಕ್ಯಾವರ್ (78) ಎಂಬ ವ್ಯಕ್ತಿ ಮೇ ತಿಂಗಳಲ್ಲೇ ನಿಧನರಾದರು. ಆದರೆ ಡಿಸೆಂಬರ್ 3ರಂದು ಅವರ ಮೊಬೈಲ್‌ಗೆ ಸಂದೇಶವೊಂದು ಬಂದಿದೆ. ನೀವು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದೀರಿ ಎಂದು ಮೆಸೇಜ್ ಬಂದಿದೆ. ಇದನ್ನೂ ಓದಿ: ಲಸಿಕೆ ನೀಡುವಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ನಂಬರ್ 1
Advertisement
Advertisement
ಈ ವಿಚಾರವನ್ನು ಪುರುಷೋತ್ತಮ್ ಅವರ ಪುತ್ರ ಪೂಲ್ ಸಿಂಗ್ ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರ ತಂದೆ ಹೆಸರಿನಲ್ಲಿ ಬಂದಿರುವ ಲಸಿಕೆ ಪಡೆದಿರುವುದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಡೌನ್‌ಲೋಡ್ ಕೂಡ ಮಾಡಿಕೊಂಡಿದ್ದಾರೆ.
Advertisement
ಪುರುಷೋತ್ತಮ್ ಅವರು ಏ.8ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು. ಆದರೆ ಮೇ 24ರಲ್ಲಿ ಮೃತಪಟ್ಟಿದ್ದರು. ಎರಡನೇ ಡೋಸ್ ಪಡೆದುಕೊಳ್ಳುವಷ್ಟರಲ್ಲಿ ಅವರು ಸಾವಿಗೀಡಾಗಿದ್ದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಾ. ಪಿ.ಎಲ್.ಭಗೊರಾಯ್ ತಿಳಿಸಿದ್ದಾರೆ.