ಛತ್ತೀಸ್‍ಗಢ್: ಕಾಣೆಯಾಗಿದ್ದ ಮಹಿಳೆಯ ಮೃತ ದೇಹ ಪತ್ತೆಯಾಗಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ 4 ದಿನಗಳ ಬಳಿಕ ಆಕೆ ಮನೆಗೆ ಬಂದಿರುವ ಘಟನೆ ಪಂಜಾಬ್‍ನ ಪಟಿಯಾಲಾದಲ್ಲಿ ನಡೆದಿದೆ.
ಮಗಳ ಸಾವಿನಿಂದ ನೊಂದು ದುಃಖದಲ್ಲಿದ್ದ ಕುಟುಂಬಸ್ಥರು ಮಹಿಳೆಯನ್ನು ನೋಡಿದ ಕೂಡಲೇ ಅಚ್ಚರಿ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ನಡೆದಿದ್ದೇನು?
26 ವರ್ಷದ ನೈನಾ ಚಮಕೌರ್ ಸಾಹೀಬ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ ಡಿಸೆಂಬರ್ 8ರಂದು ಮನೆಯಿಂದ ಬೇರೊಬ್ಬ ಪುರುಷನೊಂದಿಗೆ ನಾಪತ್ತೆಯಾಗಿದ್ದ ನೈನಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಡಿಸೆಂಬರ್ 11ರಂದು ಮಹಿಳೆಯೊಬ್ಬಳ ಶವ ಗ್ರಾಮದ ಪಕ್ಕ ಪತ್ತೆಯಾಗಿತ್ತು. ಡಿಸೆಂಬರ್ 14ರಂದು ಇದು ಮಗಳ ಶವ ಎಂದು ತಿಳಿದ ನೈನಾ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಆದರೆ ನಾಲ್ಕು ದಿನಗಳ ಬಳಿಕ ನೈನಾ ತಾನು ಪರಾರಿಯಾಗಿದ್ದ ವ್ಯಕ್ತಿಯೊಂದಿಗೆ ಮನೆಗೆ ವಾಪಸ್ ಆಗಮಿಸಿದ್ದಾಳೆ.
Advertisement
Advertisement
ಈಗ ಅಂತ್ಯ ಸಂಸ್ಕಾರ ನಡೆಸಿದ ಮಹಿಳೆಯ ಮೃತದೇಹ ಯಾರದ್ದು ಎನ್ನುವ ಪ್ರಶ್ನೆ ಎದ್ದಿದೆ. ನೈನಾ ಪತಿಯೂ ಕೂಡ ಪತ್ನಿ ಕಾಣೆಯಾದ ದಿನದಿಂದ ನಾಪತ್ತೆ ಆಗಿದ್ದ ಕಾರಣ ಪೊಲೀಸರು ಆತನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ಕುಟುಂಬಸ್ಥರು ಕೂಡ ಮೃತ ದೇಹ ನಮ್ಮದೇ ಎಂದು ತಿಳಿಸಿದ ಕಾರಣದಿಂದ ಪೊಲೀಸರು ಮೃತದೇಹವನ್ನು ನೀಡಿದ್ದರು.
Advertisement
ಸದ್ಯ ಅನಾಮದೇಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿರುವ ಕಾರಣ ಡಿಎನ್‍ಎ ಮಾದರಿ ಲಭ್ಯವಿದ್ದು, ಈ ಮೂಲಕ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ಕುಟುಂಬಸ್ಥರು ಮೃತ ದೇಹ ನಮ್ಮದಲ್ಲ ಎಂದು ಹೇಳಿದ್ದರೂ ನಿಯಮದ ಅನ್ವಯ ನಾವೇ ಅಂತ್ಯ ಸಂಸ್ಕಾರ ನಡೆಸುತ್ತಿದ್ದೇವು. ಮರಣೋತ್ತರ ಪರೀಕ್ಷೆ ಹಾಗೂ ಡಿಎನ್‍ಎ ವರದಿ ಹಾಗೂ ಮಹಿಳೆಯ ಬೆರಳಚ್ಚು ಮಾದರಿ ಲಭ್ಯವಿದ್ದು, ಈ ಮೂಲಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv