ಬೆಂಗಳೂರು: ನಾಲ್ಕು ಶವಗಳು ಬರೋಬ್ಬರು ನಾಲ್ಕೂವರೆ ವರ್ಷಗಳಿಂದ ಕುಳಿತ ಸ್ಥಿತಿಯಲ್ಲಿವೆ. ಇದೀಗ ಈ ನಾಲ್ಕು ಶವಗಳೊಂದಿಗೆ ಫಾರೆನ್ಸಿಕ್ ತಜ್ಞ ಡಾ. ದಿನೇಶ್‍ರಿಂದ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಟಿಪ್ ಟಾಪ್ ಆಗಿ ಪ್ಯಾಂಟು, ಶರ್ಟ್ ಹಾಗೂ ಶೂ ಹಾಕಿಕೊಂಡಿರುವ ಶವ ಇದು. ಅರೇ ಇದೇನಪ್ಪ ಅಂತಾ ನೋಡಿದವರೂ ಅಚ್ಚರಿಯಾಗಲೇಬೇಕು. ಅಂದ ಹಾಗೆ ಇದು ವೈದ್ಯಲೋಕದ ವಿಸ್ಮಯ.
ಆಕ್ಸ್ ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞರಾಗಿರುವ ಡಾ. ದಿನೇಶ್ ರಾವ್ ಶವಗಳನ್ನು ಕೆಡದಂತೆ ಸಂರಕ್ಷಣೆ ಮಾಡಿ ಈ ರೀತಿಯ ಪ್ರಯೋಗವನ್ನು ಮಾಡಿದ್ದಾರೆ. ಸುಮಾರು 18 ಬಗೆಯ ಕೆಮಿಕಲ್‍ನಲ್ಲಿ ಮೃತದೇಹದ ಮೇಲೆ ಹಾಕಿ ಸಂರಕ್ಷಣೆ ಮಾಡಲಾಗುತ್ತೆ. ಸುಮಾರು ಒಂದು ಗಂಟೆಯ ಪ್ರಕ್ರಿಯೆ ಇದು. ಅದಾದ ಬಳಿಕ ನೂರಾರು ವರ್ಷ ಇದನ್ನು ಕೆಡದಂತೆ ಇಡಬಹುದು. ಇದನ್ನು ಮನೆಯಲ್ಲಿ ಬೇಕಾದ್ರೂ ಇಡಬಹುದಂತೆ. ಒಟ್ಟು 60 ಸಾವಿರ ರೂ. ಇದಕ್ಕೆ ವೆಚ್ಚವಾಗುತ್ತೆ. ಈಗಾಗಲೇ ಒಂದು ದಿನದ ಮಗು ಸೇರಿದಂತೆ ಮೂರು ವಯಸ್ಕರ ಶವವನ್ನು ಸಂರಕ್ಷಣೆ ಮಾಡಿ ಇಡಲಾಗಿದೆ.
Advertisement
Advertisement
ಮೊದಲ ಬಾರಿಗೆ ಶವದೊಂದಿಗೆ ವಿಶಿಷ್ಟ ಸುದ್ದಿಗೋಷ್ಟಿ ನಡೆಸಿದ ಡಾ. ದಿನೇಶ್, ಆರಂಭದಲ್ಲಿ ಹಾವಿನ ಮೇಲೆ ನಾನು ಪ್ರಯೋಗ ಮಾಡಿದೆ. ಆದರೆ ಇದು ಯಶಸ್ವಿಯಾಗಿಲ್ಲ. ಹಾವಿನ ಶವ ಕೊಳೆತುಹೋಯ್ತು. ಹೀಗಾಗಿ ಸತ್ತ ಪ್ರಾಣಿಗಳ ಮೇಲೆ ಯಾವ ಕೆಮಿಕಲ್ ಹಾಕಿದರೆ ಸಂರಕ್ಷಣೆ ಮಾಡಬಹುದು ಅಂತಾ ನಿರಂತರ ನಾನು ಪ್ರಯೋಗ ಮಾಡಿದೆ. ಅದಾದ ಮೇಲೆ ಮನುಷ್ಯನ ಮೇಲೆ ಪ್ರಯೋಗಕ್ಕೆ ಮಾಡೋಕೆ ಶುರು ಮಾಡಿದೆ ಎಂದರು.
Advertisement
2018 ರಲ್ಲಿ ನಾನು ಒಂದು ಮೃತದೇಹದ ಮೇಲೆ ಕೆಮಿಕಲ್ ಹಾಕಿ ಸಂರಕ್ಷಣೆ ಮಾಡಿದೆವು. ನಂತರ ಹುಟ್ಟಿದ ಒಂದು ದಿನಕ್ಕೆ ಸತ್ತ ಮಗುವನ್ನು ಕೆಮಿಕಲ್ ಹಾಕಿ ಸಂರಕ್ಷಣೆ ಮಾಡಿದೆ. ಇದು ದೇಶಕ್ಕೆ ಮೊದಲು. ಕೊಂಚವೂ ವಾಸನೆ ಇಲ್ಲ. ಚರ್ಮವೂ ತೀರಾ ಹಾಳಾಗಿಲ್ಲ. ದೇಹವೂ ಕೊಳೆತಿಲ್ಲ. 18 ಕೆಮಿಕಲ್ ಮಿಕ್ಸ್ ಮಾಡಿ ಶವವನ್ನು ಸಂರಕ್ಷಣೆ ಮಾಡಲಾಗಿದೆ. ಮಗುವಿನ ಶವ ರಕ್ಷಣೆಗೂ ಹಾಗೂ ಬೇರೆ ಶವ ರಕ್ಷಣೆ ಮಾಡಿದ ಕೆಮಿಕಲ್ ಗೂ ತುಂಬಾ ವ್ಯತ್ಯಾಸ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ಹಣ ಇದ್ದವರು ಮಾತ್ರ ಸಿಎಂ ಆಗ್ತಾರೆ ಅನ್ನೋದು ಇತಿಹಾಸದಲ್ಲೇ ಇಲ್ಲ – ಯತ್ನಾಳ್‍ಗೆ ಶ್ರೀರಾಮುಲು ತಿರುಗೇಟು
Advertisement
ನಮ್ಮ ಪ್ರೀತಿಪಾತ್ರರ ಹೆಣಗಳನ್ನು ಸುಡಬೇಕಾಗಿ ಇಲ್ಲ. ಸಾವು ಶೋಕವನ್ನು ತಂದಿಟ್ಟುತ್ತೆ. ಆದರೆ ಈ ರೀತಿಯ ತಂತ್ರಜ್ಞಾನ ಮೂಲಕ ನಿರಂತರ ನೋಡುತ್ತಿರಬಹುದು. ಪುನೀತ್ ರಾಜ್ ಕುಮಾರ್ ಸತ್ತಾಗ ಇದನ್ನು ಮಾಡಬಹುದಿತ್ತು ಅಂತಾ ನಂಗೆ ಅನಿಸಿತ್ತು. ಇದಕ್ಕೆ ಕಾನೂನಿನ ಅಡೆತಡೆಗಳು ಇರಲ್ಲ. ಇದು ಕುಟುಂಬದ ಇಚ್ಛೆಗೆ ಬಿಟ್ಟಿತ್ತು. ಸಾವಿನ ನಿಖರ ಕಾರಣದ ಬಗ್ಗೆ ಒಂದು ಸರ್ಟಿಫಿಕೇಟ್ ಕೊಟ್ರೆ ಸಾಕು. ಒಂದು ಬಾರಿ ಕೆಮಿಕಲ್ ಅಪ್ಲೈ ಮಾಡಿದ್ರೇ ಸಾಕು. ಅದನ್ನು ಎಲ್ಲಿ ಬೇಕಾದ್ರೂ ಇಡಬಹುದು ಎಂದರು.
60 ಸಾವಿರ ವೆಚ್ಚದಲ್ಲಿ ಈ ಹೆಣವನ್ನು ಸಂರಕ್ಷಣೆ ಮಾಡಬಹುದು. ಒಂದು ಬಾರಿ ಕೆಮಿಕಲ್ ಹಾಕಿದರೆ ನೂರಾರು ವರ್ಷ ಇಡಬಹುದು. ಮನೆಯಲ್ಲೂ ಕೂಡ ಇದನ್ನು ಇಡಬಹುದು. ಈಗಾಗಲೇ ಮಹಾರಾಷ್ಟ್ರ ದ ಕುಟುಂಬವೊಂದು ಈ ರೀತಿಯ ದೇಹ ಸಂರಕ್ಷಣೆ ಮಾಡುವಂತೆ ಕೇಳಿಕೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು ಆಯ್ತು ಈಗ ಮಂಡ್ಯದ ಬೆಳ್ಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ