ಬೆಂಗಳೂರು: ಕೃಷಿ ಮಸೂದೆ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿರುವ ರೈತರು ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮೇಲೆ ಕಾರು ಹತ್ನಿಸಲು ಯತ್ನಿಸಿರುವ ಘಟನೆ ಗೊರಗುಂಟೆಪಾಳ್ಯದಲ್ಲಿ ನಡೆದಿದೆ.
Advertisement
ಗೊರಗುಂಟೆ ಪಾಳ್ಯ ಜಂಕ್ಷನ್‍ನ ರಸ್ತೆಯಲ್ಲಿ ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಟ್ರ್ಯಾಕ್ಟರ್ ನಲ್ಲಿ ರ್‍ಯಾಲಿ ಕೂಡ ನಡೆಯಿತು. ರ್‍ಯಾಲಿಯಲ್ಲಿ ಬರುತ್ತಿದ್ದ ರಾಜ್ಯ ರೈತ ಸಂಘದ ಬೋರ್ಡ್ ಇದ್ದ ಕಾರೊಂದು ಏಕಾಏಕಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿನ ಮೇಲೆ ಚಲಿಸಿದೆ. ಪರಿಣಾಮ ಕಾಲಿಗೆ ಗಾಯವಾಗಿದ್ದು, ಡಿಸಿಪಿ ಕುಂಟುತ್ತ ಸಾಗಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ರೈತರಿಂದ ವಿನೂತನ ಪ್ರತಿಭಟನೆ
Advertisement
Advertisement
ಗೊರಗುಂಟೆ ಪಾಳ್ಯದಲ್ಲಿ ಭದ್ರತೆಗಾಗಿ 150 ಕ್ಕೂ ಹೆಚ್ಚು ಪೋಲಿಸರು, ಒಂದು ಕೆಎಸ್‌ಆರ್‌ಪಿಸಿ ತುಕಡಿ, ಬಿಎಂಟಿಸಿ ಬಸ್ ನ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಡಿಸಿಪಿ ಕಾಲಿನ ಮೇಲೆ ಕಾರ್ ಚಲಿಸಿದೆ. ಕೂಡಲೇ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಆಗಿದ್ದು, ಕಣ್ಣಿಗೆ ಕಸ ಬಿತ್ತು ಎಂದು ಕಾರ್ ಚಾಲಕ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ರಸ್ತೆ ತಡೆಗೆ ಬಂದಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ
Advertisement