ತುಮಕೂರು: ಕೈಸಾಲ ಕೊಟ್ಟಿರುವವರಿಗೆ ಕೈಮುಗಿದು, ಎಲ್ಲಾ ಆಗಿ ಹೋಯಿತು, ಇನ್ನೇನೂ ನಮ್ಮ ಹತ್ತಿರ ಕೇಳ ಬೇಡಿ ಅಂಥ ಹೇಳಿಬಿಡಿ ಎಂದು ರೈತರಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಖಾಸಗಿ ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದಾರೆ.
ಕೊರಟಗೆರೆಯ ಕ್ಯಾಮೇನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಒಕ್ಕೂಟದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ರೈತರ ಪರವಾಗಿ ನಿಲ್ಲಬೇಕೆಂದು 49 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಮನ್ನಾ ಮಾಡಿದ್ದರೂ ಸಹ ಬಹಳ ದೊಡ್ಡ ದೊಡ್ಡ ಟೀಕೆಗಳನ್ನು ಮಾಡಿದ್ದಾರೆ. ಅವುಗಳಿಗೆ ಉತ್ತರಿಸುವ ಅವಶ್ಯಕತೆಯೂ ಇಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಶ್ನೆಯೂ ಅಲ್ಲ. ಕೇವಲ ರೈತರ ಕಷ್ಟಕ್ಕೆ ನೆರವಾಗಿದ್ದೇವೆ ಎನ್ನುವುದು ಮುಖ್ಯವೆಂದು ತಿಳಿಸಿದ್ದಾರೆ.
Advertisement
Advertisement
ರೈತರಿಗಾಗಿ ನಮ್ಮ ಅನವಶ್ಯಕತ ಖರ್ಚುಗಳನ್ನು ನಿಲ್ಲಿಸಿದ್ದೇವೆ. ಇಂದಿನಿಂದ ಸಾಲಮನ್ನಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದರ ಜೊತೆಗೆ ಬ್ಯಾಂಕ್ ಸಾಲ ಹಾಗೂ ಕೈಸಾಲ ಮನ್ನಾಗೂ ಕಾಯ್ದೆ ರೂಪಿಸಿದ್ದೇವೆ. ಈಗಾಗಲೇ ಕ್ಯಾಬಿನೆಟ್‍ನಲ್ಲಿಯೂ ಋಣಮುಕ್ತ ಕಾಯ್ದೆಯನ್ನು ಮಂಜೂರು ಮಾಡಲಾಗಿದೆ. ಕೈಸಾಲ ಪಡೆದ ರೈತರು ಸಾಲ ಕೊಟ್ಟಿರುವವರಿಗೆ ಕೈ ಮುಗಿದು, ಸ್ವಾಮಿ ಎಲ್ಲಾ ಆಗಿ ಹೋಯಿತು. ಇನ್ನೇನೂ ನಮ್ಮ ಹತ್ರ ಕೇಳಬೇಡಿ ಅಂತ ಹೇಳಿಬಿಡಿ ಎಂದು ರೈತರ ಪರವಾಗಿ ಮಾತನಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv