ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೂ ಫ್ಲೆಕ್ಸ್ ಇರಕೂಡದು ಅಂತ ಕೋರ್ಟ್ ಖಡಕ್ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಇದೀಗ ಡಿಸಿಎಂ ಪರಮೇಶ್ವರ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿರುವ ಫ್ಲೆಕ್ಸ್ ಗಳು ಬೆಂಗಳೂರಿನಲ್ಲಿ ರಾರಾಜಿಸುತ್ತಿವೆ.
ಬೆಂಗಳೂರನ್ನು ಫ್ಲೆಕ್ಸ್ ಫ್ರೀ ಮಾಡಬೇಕೆಂದು ಸಿಎಂ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ. ಹೈಕೋರ್ಟ್ ಆದೇಶವನ್ನು ಪರಿಣಾಮಕಾರಿಯಾಗಿ ಫಾಲೋ ಮಾಡಬೇಕು ಅಂತ ಡಿಸಿಎಂ ಹೇಳಿದ್ದಾರೆ. ಆದರೆ ವಿಚಿತ್ರ ಅಂದ್ರೆ ಡಿಸಿಎಂ ಪರಮೇಶ್ವರ್ ಅವರದ್ದೇ ಫ್ಲೆಕ್ಸ್ ಗಳು ರಾರಾಜಿಸ್ತಿವೆ.
ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಅವರ ಬೆಂಬಲಿಗರಿಂದಲೇ ರೂಲ್ಸ್ ಬ್ರೇಕ್ ಆಗಿದ್ದು, ಡಾ. ಜಿ ಪರಮೇಶ್ವರ್ ಫಾಲೋವರ್ಸ್‍ನಿಂದ ಹೈಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಂದು ಡಿಸಿಎಂ ಪರಮೇಶ್ವರ್ ಅವರ ಹುಟ್ಟುಹಬ್ಬವಾಗಿದ್ದು, ರೇಸ್ ಕೋರ್ಸ್ ರಸ್ತೆಯಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್ ಗಳನ್ನು ಆಳವಡಿಸಿದ್ದಾರೆ. ಇದನ್ನೂ ಓದಿ: ಫ್ಲೆಕ್ಸ್ ತೆರವು ವೇಳೆ ಹಲ್ಲೆಗೈದ ನಾಲ್ವರ ಬಂಧನ
ಕೆಪಿಸಿಸಿ ಕಾರ್ಯದರ್ಶಿ ಪದ್ಮನಾಭ್ ಶುಭಕೋರಿ ಫ್ಲೆಕ್ಸ್ ಗಳನ್ನು ಹಾಕಿದ್ದಾರೆ. ಒಂದೆಡೆ ಪಾಲಿಕೆಯಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆ ಮುಂದುವರೆದರೆ, ಮತ್ತೊಂದೆಡೆ ಪರಮೇಶ್ವರ್ ಬೆಂಬಲಿಗರಿಂದ ಫ್ಲೆಕ್ಸ್ ಆಳವಡಿಕೆ ಮಾಡಲಾಗುತ್ತಿದೆ. ಸಿಎಂ ಗೃಹಕಚೇರಿ ಕೃಷ್ಣಾ ಎದುರು ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಸರ್ಕಾರಿ ನೌಕರರ ಸಂಘದಿಂದ ಫ್ಲೆಕ್ಸ್ ಗಳನ್ನು ಆಳವಡಿಸಿಲಾಗಿದೆ. ಸಿಎಂ ಹಾಗೂ ಪರಮೇಶ್ವರ್ ಫೋಟೋ ಹಾಕಿ ಫ್ಲೆಕ್ಸ್ ಅಳವಡಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಈ ಬಗ್ಗೆ ವರದಿ ಮಾಡಿದ್ದು, ಈ ಬೆನ್ನಲ್ಲೇ ರೇಸ್ ಕೋರ್ಸ್ ರಸ್ತೆಯಲ್ಲಿದ್ದ ಪರಮೇಶ್ವರ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews