Bengaluru CityDistrictsKarnatakaLatestMain Post

ಮೈತ್ರಿ ಸರ್ಕಾರ 4 ವರ್ಷ ಮುಂದುವರಿಯಲಿದೆ- ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ 4 ವರ್ಷವೂ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಹೀನಾಯ ಸೋಲಿನ ಬಳಿಕ ನಗರದಲ್ಲಿ ಸಿಎಂ-ಡಿಸಿಎಂ ಜಂಟಿ ಸುದ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿದ ಪರಮೇಶ್ವರ್, ಎಲ್ಲ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ. ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ ಹೇಳಿದ್ದಾರೆ.

ರಾಷ್ಟ್ರ ಸರ್ಕಾರಕ್ಕೆ ಜನಾದೇಶ ಇದೆ. ದೇಶದ ಆಡಳಿತವನ್ನು ನಡೆಸಲು ಬಿಜೆಪಿಯವರಿಗೆ ಜನಾದೇಶ ಸಿಕ್ಕಿದೆ. ಅವರು ನಡೆಸಿಕೊಳ್ಳುತ್ತಾರೆ. ರಾಜ್ಯ ಸರ್ಕಾರಕ್ಕೆ ಈಗಾಗಲೇ ಕಳೆದ ವರ್ಷ ಜನಾದೇಶ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಾವು ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರದಲ್ಲಿ ನಮಗೆ ಸಿಕ್ಕಿರುವ ಜನಾದೇಶದ ಆಧಾರದ ಮೇಲೆ ಸರ್ಕಾರವನ್ನು ಮುಂದುವರಿಸುತ್ತೇವೆ. 4 ವರ್ಷ ರಾಜ್ಯದ ಜನತೆಗೆ ಕೊಟ್ಟಿರುವ ಒಳ್ಳೆಯ ಆಡಳಿತದ ಭರವಸೆಯನ್ನು ಈಡೇರಿಸುವತ್ತಾ ಮುಂದುವರಿಸುತ್ತೇವೆ. ಅದೇ ರೀತಿ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಕೊಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button