ತುಮಕೂರು ನಮಗೆ ಬೇಕು: ಕೈ ನಾಯಕರ ವಿರುದ್ಧ ಡಿಸಿಎಂ ಅಸಮಾಧಾನ

Public TV
1 Min Read
DCM PARAMESHWAR

ಬೆಂಗಳೂರು: ಜೆಡಿಎಸ್ ಜೊತೆಗೆ ಸೀಟು ಹಂಚಿಕೆ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್‍ನಲ್ಲೇ ಬಂಡಾಯ ಎದ್ದಿದೆ. ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧವೇ ಉಪಮುಖ್ಯಮಂತ್ರಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತುಮಕೂರು ಜೆಡಿಎಸ್ ಪಟ್ಟಿಯಲ್ಲೇ ಇರಲಿಲ್ಲ. ಜೆಡಿಎಸ್‍ನವರಿಗೆ ಹೇಗೆ ಕ್ಷೇತ್ರ ಬಿಟ್ಟು ಕೊಟ್ರೋ ಗೊತ್ತಿಲ್ಲ. ಹೀಗಾಗಿ ಇದೀಗ ತುಮಕೂರು ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

MUDDAHANUMEGOWDA

ಮುದ್ದಹನುಮಗೌಡ ಅವರು ಹಾಲಿ ಸಂಸರಾಗಿದ್ದಾರೆ. ನಮ್ಮಲ್ಲಿ 10 ಜನ ನಮ್ಮ ಪಕ್ಷದವರು ಸಿಟ್ಟಿಂಗ್ ಎಂಪಿಗಳಿದ್ದಾರೆ. ಆ 10 ಜನಕ್ಕೂ ಟಿಕೆಟ್ ಕೊಡಬೇಕು ಎಂದು ವರಿಷ್ಠರ ಜೊತೆ ಚರ್ಚೆ ಮಾಡುವಾಗ ಪ್ರಸ್ತಾಪ ಮಾಡಿದ್ದೆವು. ಆದ್ರೆ ಈಗ ತುಮಕೂರನ್ನು ಬಿಟ್ಟುಕೊಟ್ಟಿದ್ದಾರೆ. ಅದು ನಮಗೆ ಬೇಕು. ನಮ್ಮ ಸಿಟ್ಟಿಂಗ್ ಎಂಪಿ ಇದ್ದಾರೆ ಎಂದು ನಾನು ಕೇಳುತ್ತಿದ್ದೇನೆ ಎಂದು ಅವರು ಹೇಳಿದ್ರು.

ಈ ಕುರಿತು ಗುರುವಾರ ದೇವೇಗೌಡರನ್ನು ನಾನು ಭೇಟಿ ಮಾಡಿದ್ದೆ. ಇಂದು ಮುಖ್ಯಮಂತ್ರಿಗಳನ್ನು ಕೂಡ ಭೇಟಿ ಮಾಡುತ್ತೇನೆ. ನಮಗೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ ಮುದ್ದಹನುಮೇಗೌಡ ಕಳೆದ 5 ವರ್ಷಗಳಿಂದ ಕೆಲಸ ಮಾಡಿದ್ದಾರೆ. ನಾವು ಬೆಂಗಳೂರಿಗೆ ಬಂದ ಬಳಿಕ ದೆಹಲಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿದೆ ಎಂದು ಹೇಳಿದ್ದಾರೆ.

G. Parameshwar

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publict

Share This Article
Leave a Comment

Leave a Reply

Your email address will not be published. Required fields are marked *