ಬೆಳಗಾವಿ: ಕುಂದಾನಗರಿಗೆ (Belagavi) ಬರುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಹಳ ಸೈಲೆಂಟ್ (Silent) ಆದಂತೆ ಕಾಣುತ್ತಿದೆ.
ಪಕ್ಷದ ಅಂತರಿಕ ಬೆಳವಣಿಗೆಗಳ ಪ್ರಶ್ನೆಗೆ ಡಿಕೆಶಿ ಉತ್ತರ ಕೊಡುತ್ತಿಲ್ಲ. ಏನೇ ಕೇಳಿದರೂ ಸಹ ಪಕ್ಷ ಸಂಘಟನೆ ಮಾತ್ರ ನನ್ನ ಗುರಿ ಎನ್ನುತ್ತಿದ್ದಾರೆ. ಪ್ರಶ್ನೆ ಕೇಳಿದರೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಕಡೆ ಬೊಟ್ಟು ಮಾಡುತ್ತಿದ್ದಾರೆ.
Advertisement
Advertisement
ಕಾಂಗ್ರೆಸ್ ಪಕ್ಷದ ನೂತನ ಶಾಸಕರ ವಿದೇಶಿ ಪ್ರವಾಸದ ಕುರಿತು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅಸೀಫ್ ಸೇಠ್ ಮಾತನಾಡಿದ್ದರು. ಮಾಧ್ಯಮಗಳು 15ಕ್ಕೂ ಹೆಚ್ಚು ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಪ್ರಶ್ನೆ ಮಾಡಿದಾಗ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ತನ್ನದೇ ವಿಡಿಯೋ ನೋಡಿದ ಪ್ರಜ್ವಲ್ ರೇವಣ್ಣ
Advertisement
ನನ್ನದು ಈಗ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಮಾತ್ರ. ಪಕ್ಷ ಸಂಘಟನೆ ನನ್ನಗುರಿ ಎಂದು ಡಿಕೆಶಿ ಹೇಳಿ ಹೊರಟರು.