ಬೆಂಗಳೂರು: ಕುಡಿಯುವ ನೀರು ಇರಬಹುದು, ಇವರ ಸಮಸ್ಯೆ ಕಷ್ಟ ಏನೇ ಇದ್ದರೂ ಸಹಾಯಕ್ಕೆ ಬರುವುದು ನಾವೇ ಹೊರತು ದೆಹಲಿಯಿಂದ ಯಾರೂ ಬರಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್ (DK Suresh) ಪರವಾಗಿ ಡಿಕೆಶಿ ಇಂದು ಮತ ಬೇಟೆಗೆ ಇಳಿದರು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆಶಿ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಸಂಡೆ ಮತದಾರರ ಭೇಟಿಗೆ ಅಂತ ಬಂದಿದ್ದೇನೆ. ಸಹಾಯ ಕೇಳಿದ್ದೇನೆ. ನಿಮ್ಮ ಸಮಸ್ಯೆ ಕಷ್ಟ ಏನೇ ಇದ್ದರು ಸಹಾಯಕ್ಕೆ ಬರುವುದು ನಾವೇ. ದೆಹಲಿಯಿಂದ ಯಾರೂ ಬರಲ್ಲ ಎಂದರು.
ಇವತ್ತು ಪಾಪ ಕುಮಾರಸ್ವಾಮಿ ನಾನು ಮಹದಾಯಿ ಮಾಡೇ ಮಾಡ್ತೀನಿ ಅಂತಿದ್ದಾರೆ. ಅಧಿಕಾರ ಅವರ ಕೈಯಲ್ಲಿ ಇತ್ತಲ್ಲ, ಅಧಿಕಾರ ಇದ್ದಾಗ ಏನು ಮಾಡೋಕೆ ಆಗಲಿಲ್ಲ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಬಿರಿಯಾನಿ ಕೊಟ್ಕೊಂಡು ಹೋಗ್ತಿದ್ದಾರೆ ಅಂತ ನಗುತ್ತಿದ್ದರು. ಅವರ ಸ್ಟೇಟ್ ಮೆಂಟ್ ಎಲ್ಲಾ ತೆಗೆಯಿರಿ ಕಬಾಬ್ ತಿನ್ಕೊಂಡು ಬಂದ್ವಾ…? ಎಷ್ಟು ನಡೆದಿದ್ದೇನೆ ಎಷ್ಟು ಹೋರಾಟ ಮಾಡಿದ್ದೇನೆ ಯಾರಿಗೋಸ್ಕರ ಮಾಡಿದ್ದೇನೆ..? ರಾಜ್ಯದ ಜನತೆಗಾಗಿ ಎಂದು ಹೇಳಿದರು.
ರಾಜಕಾರಣದಲ್ಲೂ ಅದೊಂದು ಸಿದ್ಧಾಂತ ನಮ್ಮ ಹೋರಾಟವನ್ನ ಅವರ ಕೈಲಿ ಸಹಿಸೋಕೆ ಆಗ್ತಿಲ್ಲ. ಇರಲಿ ಅವರು ಏನಾದರು ಮಾಡಿಕೊಂಡು ಹೋಗ್ತಾ ಇರಲಿ. ಜನರ ಬದುಕಿಗೆ ನಮ್ಮ ಹೋರಾಟ ಬೆಂಗಳೂರು ಕುಡಿಯುವ ನೀರಿಗೆ (Drinking Water) ವಿಚಾರಕ್ಕೆ ಹೋರಾಟ. ನೀರಿನ ಇಲಾಖೆ ತೆಗೆದುಕೊಂಡಿರೋದೆ ಈ ಸಮಸ್ಯೆ ಬಗೆಹರಿಸೋಕೆ. ಜನರಿಗೆ ನಮ್ಮ ಮೇಲೆ ನಂಬಿಕೆ, ವಿಶ್ವಾಸ ಇದೆ. ಏನು ಮಾತನಾಡುತ್ತೇನೆ, ಅದರಂತೆ ನಡೆದುಕೊಳ್ಳುತ್ತೇನೆ ಎಂಬ ವಿಶ್ವಾಸ ಇದೆ. ಆ ಕೆಲಸ ನಾನು ಮಾಡುತ್ತೇನೆ ಮತದಾರರಿಗೂ ಮನವೊಲಿಕೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಏ.14 ರಂದು ರಾಜ್ಯಕ್ಕೆ ನಮೋ- ಚಿಕ್ಕಬಳ್ಳಾಪುರ, ಬೆಂಗ್ಳೂರಿನಲ್ಲಿ ಬೃಹತ್ ರೋಡ್ ಶೋ
ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿ: ಚುನಾವಣಾ ಆಯೋಗದ ಕಾರಣ ಬರ ಬಿಡುಗಡೆ ಆಗಿಲ್ಲ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬರಕ್ಕೂ ಚುನಾವಣಾ ಆಯೋಗಕ್ಕೂ ಏನು ಸಂಬಂಧ?, ಅವರೇ ಸಚಿವರು, ನಾವು ಕೊಟ್ಟು ಎಷ್ಟು ದಿನ ಆಯಿತು..?, ಐಮ್ ವೆರಿ ಹ್ಯಾಪಿ, ನಿರ್ಮಲಾ ಸೀತಾರಾಮನ್ ವಿಳಂಬ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಬಿಡುಗಡೆ ಮಾಡಲು ಆಗಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರಿಗೆ ಅರ್ಥವಾಗಿದೆ, ಕರ್ನಾಟಕ ರಾಜ್ಯದ ಜನತೆಗೆ ಇದು ಅಕ್ಷಮ್ಯ ಅಪರಾಧ. ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗಿದೆ. ನಾವು ಚರ್ಚೆಗೆ ಸವಾಲು ಹಾಕಿದಾಗ ಹೇಳುತ್ತಿದ್ದಾರೆ. ಡಿಕೆ ಸುರೇಶ್ ಅವರು ನಮ್ಮ ಹಕ್ಕು, ನಮ್ಮ ತೆರಿಗೆ ಎಂದು ಹೋರಾಟ ಮಾಡಿದ್ದರು. ಅದಕ್ಕೆ ಇವರು ಒಪ್ಪಿಕೊಂಡಿದ್ದಾರೆ. ಒಪ್ಪಿಕೊಂಡಿದಕ್ಕೆ ನಾನು ಧನ್ಯವಾದಗಳು ತಿಳಿಸುತ್ತೇನೆ ಎಂದರು.