ರಾಮನಗರ: ಕೇಂದ್ರ ಮಂತ್ರಿ ಕುಮಾರಸ್ವಾಮಿ (H.D.Kumaraswamy) ಅವರು ಡಿಸಿಗೆ ಧಮ್ಕಿ ಹಾಕುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಗರಂ ಆದರು.
ಚನ್ನಪಟ್ಟಣ (Channapatna) ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿಕೆಶಿ, ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಕಳೆದ ಮೂರು ತಿಂಗಳಿನಿಂದ ನಿಮ್ಮ ತಾಲೂಕಿನಲ್ಲಿ ಬದಲಾವಣೆ ಆಗ್ತಿದೆ. ಚನ್ನಪಟ್ಟಣದ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ. ಕೊಟ್ಟ ಮಾತಿನಂತೆ ಚನ್ನಪಟ್ಟಣ ಅಭಿವೃದ್ಧಿ ಮಾಡ್ತಿದ್ದೇವೆ. ಸಾಕಷ್ಟು ಮಂತ್ರಿಗಳು ಬಂದು ಸಭೆ ಮಾಡ್ತಿದ್ದಾರೆ. ಅಧಿಕಾರಿಗಳನ್ನ ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತಿದ್ದೇವೆ. ಈ ಹಿಂದಿನ ಶಾಸಕರ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಜಮೀರ್‌ಗೆ ಹಳೇ ಸ್ನೇಹಿತರು ಹಾಗಾಗಿ ಅವರನ್ನ ನೆನೆಸಿಕೊಂಡಿದ್ದಾರೆ. ಈಗ ಆವರಿಗೂ ಈ ಕ್ಷೇತ್ರಕ್ಕೂ ಸಂಬಂಧ ಇಲ್ಲ ಎಂದು ಹೆಚ್ಡಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಗಂಗೇನಹಳ್ಳಿ ಡಿನೋಟಿಫಿಕೇಶನ್ ಕೇಸ್ – ಲೋಕಾಯುಕ್ತ ವಿಚಾರಣೆ ಎದುರಿಸಿದ ಬಿಎಸ್‌ವೈ
ಈ ಕ್ಷೇತ್ರಕ್ಕೂ ನಮಗೂ ಸಂಬಂಧ ಇದೆ. ಹಿಂದೆ ಇದೇ ಕ್ಷೇತ್ರದ ಒಂದು ಹೋಬಳಿಯಲ್ಲಿ ನಾನು ಸ್ಪರ್ಧಿಸುತ್ತಿದ್ದೆ. ನನಗೂ ನಿಮಗೂ ಭಕ್ತ ಹಾಗೂ ಭಗವಂತನ ಸಂಬಂಧ ಇದೆ. ಕ್ಷೇತ್ರದಲ್ಲಿ 7 ಎಕರೆಯಲ್ಲಿ ಸೈಟ್ ಮಾಡಿ ನಿವೇಶನ ಹಂಚುತ್ತಿದ್ದೇವೆ. ಸಾಕಷ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡ್ತಿದ್ದೇವೆ. ಇದನ್ನ ನಾನು ಕುಮಾರಸ್ವಾಮಿ ಅವರಿಗೆ ಹೇಳ್ತಿದ್ದೇನೆ. ಪಾಪ ಕುಮಾರಣ್ಣ ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿದ್ದಾರಂತೆ. ನಾವಿದ್ದಾಗ ಕೆಲಸ ಆಗಿಲ್ಲ, ಈಗ ಏನ್ಮಾಡ್ತಿದ್ದೀರಿ ಅಂತಾ. ಕುಮಾರಣ್ಣ ನಿನ್ನ ಗೊಡ್ಡು ಬೆದರಿಕೆಗೆ ಹೆದರಲ್ಲ. ಕುಮಾರಸ್ವಾಮಿ ನಿನ್ನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ಜನರಿಗೆ. ಇಲ್ಲಿ ಯಾರೂ ಕೂಡಾ ಶಾಶ್ವತ ಅಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. ಕುಮಾರಸ್ವಾಮಿ ಬಿಟ್ಟು ಸಾಕಷ್ಟು ಕೌನ್ಸಿಲರ್‌ಗಳು ಕಾಂಗ್ರೆಸ್‌ಗೆ ಬಂದಿದ್ದಾರೆ. ಈಗ ಕೌನ್ಸಿಲರ್‌ಗಳಿಗೂ ಕುಮಾರಸ್ವಾಮಿ ಬೆದರಿಕೆ ಹಾಕ್ತಿದ್ದಾರಂತೆ. ಆದರೆ ಅವರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನಮ್ಮದು ಎಂದು ಡಿಕೆಶಿ ತಿಳಿಸಿದರು.
ಕ್ಷೇತ್ರಕ್ಕೆ 5 ಸಾವಿರ ಮನೆಗಳನ್ನ ಹಂಚುತ್ತಿದ್ದೇವೆ. ಜಮೀರ್ ಅವರು ಕೇವಲ ಸೈಟ್ ಅಲ್ಲ ಜನರಿಗೆ ಮನೆ ಕೊಡಬೇಕು ಎಂದಿದ್ದಾರೆ. ಜಮೀರ್ ಹಾಗೂ ನಾನು ಕೂತು ಸಭೆ ಮಾಡಿ ನಿಮಗೆ ಮನೆ ನೀಡುವ ಕೆಲಸ ಮಾಡ್ತೇವೆ. 150 ಎಕರೆ ಜಮೀನನ್ನ ಹುಡುಕಿ ಬಡವರಿಗೆ ಸೈಟ್ ಹಂಚುತ್ತಿದ್ದೇವೆ.ಇನ್ನೂ 150 ಎಕರೆ ಖರೀದಿ ಮಾಡಿ ಜನರಿಗೆ ಸೈಟ್ ಕೊಡ್ತೀವಿ. ಚನ್ನಪಟ್ಟಣಕ್ಕೆ 500 ಕೋಟಿ ರೂ. ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲಾ ಮಂತ್ರಿ ರಾಮಲಿಂಗಾರೆಡ್ಡಿ ಅವರು ಅಭಿವೃದ್ಧಿ ಕೆಲಸಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ. ಕ್ಷೇತ್ರಕ್ಕೆ ವಿಶೇಷ ಅನುದಾನ ತಂದಿದ್ದೇವೆ. ಇಂದು ಒಂದೇ ದಿನ 200 ಕೋಟಿಯ ಅಭಿವೃದ್ಧಿ ಕೆಲಸಕ್ಕೆ ಚಾಲನೆ ಕೊಡ್ತಿದ್ದೇವೆ. ಕುಮಾರಣ್ಣ ಇದಕ್ಕೆ ನೀನು ಉತ್ತರ ಕೊಡಬೇಕು. ನಿನಗೆ ಭಗವಂತ ಅವಕಾಶ ಕೊಟ್ಟಿದ್ದ. ಜನರ ಋಣ ತೀರಿಸುವ ಕೆಲಸ ನೀವು ಮಾಡಿಲ್ಲ. ನಾವೆಲ್ಲ ಸೇರಿ ನಿಮ್ಮನ್ನ ಸಿಎಂ ಮಾಡಿದ್ವಿ. ನೀವು ಕ್ಷೇತ್ರಕ್ಕೆ ಬಂದು ನಿಮ್ಮ ಪರವಾಗಿ ಇದ್ದೀನಿ ಅಂತಾ ಜನರ ಬಳಿ ಹೇಳುವ ಹಕ್ಕು ಕಳೆದುಕೊಂಡಿದ್ದೀರಿ. ಈಗ ಉಪಚುನಾವಣೆ ಬರ್ತಿದೆ. ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆಗಲಿ. ಡಿಕೆಶಿನೇ ಅಭ್ಯರ್ಥಿ ಅಂತಾ ವೋಟ್ ಹಾಕಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರಿಂದಲೇ ಪಕ್ಷಕ್ಕೆ ಸೋಲು: ಈಶ್ವರ್ ಖಂಡ್ರೆ