ಮನೆಯಲ್ಲಿ ಅತ್ತೆ-ಸೊತೆ ಇದ್ರೆ ಯಾರಿಗೆ ದುಡ್ಡು ಹಾಕಬೇಕು, ಮನೆ ಯಜಮಾನಿ ಯಾರು? – ಗ್ಯಾರಂಟಿ ಬಗ್ಗೆ ಡಿಕೆಶಿ ಮಾತು

Public TV
1 Min Read
DK SHIVAKUMAR 6

ಬೆಂಗಳೂರು: ಮನೆಯಲ್ಲಿ ಅತ್ತೆ-ಸೊಸೆ ಇದ್ದರೆ ಯಾರಿಗೆ ದುಡ್ಡು ಹಾಕಬೇಕು? ಮನೆ ಯಜಮಾನಿ ಯಾರು? ಬ್ಯಾಂಕ್‌ ಖಾತೆ ಇದೆಯಾ? ಎಲ್ಲವೂ ತೀರ್ಮಾನ ಆಗಬೇಕು ಎಂದು ಗ್ಯಾರಂಟಿ ಯೋಜನೆ (Congress Guarantee Card) ಜಾರಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಮಾತನಾಡಿದರು.

1ನೇ ತಾರೀಖು ಕ್ಯಾಬಿನೆಟ್ ಇದೆ. ಗೈಡ್‌ಲೈನ್ಸ್ ಬರಲಿದೆ. ಸ್ಟ್ರೈಕ್ ಮಾಡೋರಿಗೆ ಬೇಡ ಅನ್ನಲ್ಲ,‌ ಮಾಡ್ಲಿ. 15 ಲಕ್ಷ ರೂ. ಪ್ರತಿಯೊಬ್ಬರ ಅಕೌಂಟ್‌ಗೆ ಹಾಕ್ತೀವಿ ಅಂದ್ರಲ್ಲಾ, ಹಾಕಿದ್ರಾ? ಮಗು ಹುಟ್ಟಿ ಇನ್ನೂ 15 ದಿನ ಆಗಿದೆ. ಬಟ್ಟೆ ಹೊಲಿಸಬೇಕು, ಅಳತೆ ಕೊಡಬೇಕು ಎಂದು ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಮನೆಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ, ಎಲ್ಲರಿಗೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

CONGRESS GURANTEE 1

ಮೊದಲು ಅವರು ಕೊಟ್ಟ ಭರವಸೆ ಬಗ್ಗೆ ಮಾತಾಡ್ಲಿ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು. ಟೀಕೆ ಮಾಡಲಿ. ಒಂದು ಲಕ್ಷ ಸಾಲ ಮನ್ನಾ ಮಾಡ್ತೇವೆ ಅಂದ್ರು.. ‌ಏನಾಯಿತು ಎಂದು ವಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಖಾತೆ ವಿಚಾರವಾಗಿ ರಾಮಲಿಂಗರೆಡ್ಡಿ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಹಿತದೃಷ್ಠಿಯಿಂದ ಭೇಟಿ ನೀಡಿ ಮಾತನಾಡಿದ್ದೇನೆ. ಕೆಲವೊಂದು ಊಹಾಪೋಹದ ಸ್ಟೋರಿ ಬಂದಿದೆ. ಎಂಟು ಬಾರಿ ಯಾರಾದರೂ ಆಯ್ಕೆಯಾಗಿದ್ರೆ ಅದು ರಾಮಲಿಂಗಾರೆಡ್ಡಿ. ನಾವು ಈ‌ ಪಕ್ಷ ಕಟ್ಟಿದ್ದೇವೆ, ಬೆಳೆಸಿದ್ದೇವೆ. ಸಾಕಷ್ಟು ನೋವುಗಳನ್ನ ಅನುಭವಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸಿಎಂ ಆಗಿಯೇ ಆಗ್ತಾರೆ: ಲಕ್ಷ್ಮಿ ಹೆಬ್ಬಾಳ್ಕರ್

ಕಳೆದ ಬಾರಿ ಅವರಿಗೂ ನನಗೂ ಸಚಿವ ಸ್ಥಾನ ಇರಲಿಲ್ಲ. ನಾವು ಬೇರೆ ಪಾರ್ಟಿಗೆ ಹೋಗಿದ್ರೆ ಏನೇನೋ ಆಗ್ತಿದ್ವಿ. ಮನುಷ್ಯ ಅಂದಮೇಲೆ ಸಿನಿಯಾರಿಟಿ ಅನ್ನೋದು ಬರುತ್ತೆ. ರಾಮಲಿಂಗಾರೆಡ್ಡಿ ಅವರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಮನುಷ್ಯ ಅಂದಮೇಲೆ ಹಿರಿತನ‌ ಬರುತ್ತೆ. ಕೆಲವೊಮ್ಮೆ ರಾಜಕೀಯದಲ್ಲಿ ಏನೂ ಮಾಡಲು ಆಗಲ್ಲ ಎಂದು ತಿಳಿಸಿದರು.

Share This Article