– ವಕ್ಫ್ ವಿಚಾರಕ್ಕೆ ಪ್ರತಿಭಟನೆ ಮಾಡ್ತಿರೋದು ಬಿಜೆಪಿಯವರ ಮೂರ್ಖತನ
ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿಗೆ ಕರಿಯ ಎಂದ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಜಮೀರ್ ಹೇಳಿದ್ದು ಸರಿಯಲ್ಲ.. ನಾನು ಅದನ್ನು ಖಂಡಿಸುತ್ತೇನೆ ಎಂದಿದ್ದಾರೆ.
ಸದಾಶಿವನಗರದಲ್ಲಿ ಮಾತನಾಡಿದ ಅವರು, ನಾನು ಆ ಹೇಳಿಕೆಯನ್ನ ಒಪ್ಪುವುದಿಲ್ಲ. ಅದನ್ನ ನಾನು ಖಂಡಿಸ್ತೇನೆ. ಜಮೀರ್ ಅವರು ಏನುಬೇಕಾದ್ರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ. ನಾನು ಆನ್ ರೆಕಾರ್ಡ್ ಹೇಳ್ತೇನೆ ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ತಿಳಿಸಿದರು. ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ತೀರ ಎಂಬ ಪ್ರಶ್ನೆಗೆ, ಅದನ್ನ ಆಮೇಲೆ ನೋಡೋಣ ಎಂದ ಡಿಕೆಶಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ನನ್ನ ತೆರಿಗೆ ನನ್ನ ಹಕ್ಕು – ಡಿಕೆಶಿ ವಿರುದ್ಧ ಸಿಡಿದ ಜಯನಗರ ಜನತೆ, ಭಾನುವಾರ ಉಗ್ರ ಹೋರಾಟ
ಜಮೀರ್ ವಿರುದ್ಧ ಶಿಸ್ತು ಕ್ರಮ ವಿಚಾರವಾಗಿ ಮಾತನಾಡಿ, ಜಮೀರ್ ಅವರದ್ದು ಪರ್ಸನಲ್ ವಿಚಾರ. ಅವರು ಮಾತನಾಡಬಾರದಿತ್ತು. ಕಪ್ಪು ಬಿಳುಪು ಅದೆಲ್ಲಾ ಬೇಡ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಪ್ರೀತಿಯಿಂದ ಮಾತಾಡಿದ್ರೋ ಸಲುಗೆಯಿಂದ ಮಾತನಾಡಿದ್ದಾರೋ ತಪ್ಪು ತಪ್ಪೇ. ಜಮೀರ್ ಅವರಿಗೆ ಆಂತರಿಕವಾಗಿ ಹೇಳಿದ್ದೇವೆ. ಅವರು ಕ್ಷಮೆ ಕೂಡ ಕೇಳಿದ್ದಾರೆ. ನಾವು ಆ ಹಂತ ಹೋಗಬಾರದು ಅಷ್ಟೇ. ಅವರಿಬ್ಬರು ಏನು ಅಂತ ಗೊತ್ತಿಲ್ಲ. ಅದು ಜನ ತೀರ್ಮಾನ ಮಾಡಲಿ. ನಾನು ಹೇಳಿದ್ದು, ಜಮೀರ್ ಹೇಳಿದ್ದು ರಾಂಗ್. ನಾವು ಅವರನ್ನ ತಿದ್ದುತ್ತೇವೆ ಎಂದರು.
ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿ, ಅದು ಬಿಜೆಪಿಯವರ ಮೂರ್ಖತನ. ಅವರ ಕಾಲದಲ್ಲೇ ಪಹಣಿಗಳು ಬರ್ತಿವೆ. ಅದನ್ನ ನಮ್ಮವರು ನೋಡಿಲ್ಲ. ಈಗ ಅದರ ಬಗ್ಗೆ ಮಾತನಾಡ್ತಿದ್ದಾರೆ. ನಾವು ಮಾತಾಡಿದ್ರೆ ನೀವು ಕವರ್ ಮಾಡಲ್ಲ, ಅವರು ಮಾತನಾಡಿದ್ರೆ ಕವರ್ ಮಾಡ್ತೀರ ಎಂದು ಮಾಧ್ಯಮದವರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಉಪಚುನಾವಣಾ ಕಣದಲ್ಲಿ ಬೆಟ್ಟಿಂಗ್ ಭರಾಟೆ – ಕುತೂಹಲ ಹೆಚ್ಚಿಸಿದ ಚನ್ನಪಟ್ಟಣ ಫಲಿತಾಂಶ
ಹಿಂದೆ ಅವರು ಖರೀದಿ ಮಾಡಿದ್ದು ಏನು? ಕುರಿಗಳನ್ನೇ ತಾನೇ ಅವರು ಖರೀದಿ ಮಾಡಿದ್ದು? ಅಶ್ವಥನಾರಾಯಣ್, ಶ್ರೀನಿವಾಸಗೌಡ ಮನೆಗೆ ಹಣ ತೆಗೆದುಕೊಂಡು ಹೋಗಿರಲಿಲ್ವ? ಸದನದಲ್ಲೇ ಇದರ ಬಗ್ಗೆ ಚರ್ಚೆ ಆಗಲಿಲ್ವೇ? ಮೊದಲು ಸಾವಿರ ಕೋಟಿ ಕಲೆಕ್ಟ್ ಮಾಡಿದ್ಯಾರು? ಮೊದಲು ಅಲ್ಲಿಂದ ಶುರುಮಾಡಿ, ಸಿಎಂ ಹೇಳಿದ ನಂತರ ಇದೆಲ್ಲ ಶುರುವಾಗಿದೆ ಎಂದು ಶಾಸಕರ ಆಪರೇಷನ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದರು.