ಬೆಂಗಳೂರು: ಡಿಸಿಇಟಿ-2026ಕ್ಕೆ (DCET 2026) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಜು.15 ರಿಂದ 17ರವರೆಗೆ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA)ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ (Document Verification) ನಡೆಯಲಿದೆ.
‘ಬಿ’ಯಿಂದ ‘ಒ’ವರೆಗಿನ ಕಂಡಿಕೆಗಳಡಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು, ಅರ್ಹತಾ ಕಂಡಿಕೆ ‘ಎ’ಯನ್ನು ಕ್ಲೇಮ್ ಮಾಡಿ ಡಿಪ್ಲೊಮಾ ಪರೀಕ್ಷೆಯನ್ನು ಹೊರ ರಾಜ್ಯಗಳ ಬೋರ್ಡುಗಳಿಂದ ತೇರ್ಗಡೆಯಾದವರು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ, ಜಿಟಿಟಿಸಿ, ಸಿಪಿಐಟಿ, ಜವಳಿ ಕೈಗಾರಿಕಾ ಇಲಾಖೆಗಳ ಬೋರ್ಡ್ ಹೊರತುಪಡಿಸಿ ಇತರೆ ಯಾವುದೇ ಬೋರ್ಡ್ ನಿಂದ ಡಿಪ್ಲೊಮಾ ತೇರ್ಗಡೆಯಾದವರ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್
ಅಭ್ಯರ್ಥಿಗಳು ಮೂರು ದಿನಗಳ ಪೈಕಿ ಯಾವುದಾದರೊಂದು ದಿನಕ್ಕೆ ಸ್ಲಾಟ್ ಬುಕ್ ಮಾಡಿಕೊಂಡು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರೊಳಗಿನ ಸಮಯದಲ್ಲಿ ಕಚೇರಿಗೆ ಹಾಜರಾಗಬೇಕು. ಅಭ್ಯರ್ಥಿಯ ಪರವಾಗಿ ಬೇರೆ ಯಾರೂ ಹಾಜರಾಗಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಅರ್ಜಿಯಲ್ಲಿ ಕೋರಿರುವ ಕ್ಲೇಮುಗಳಿಗೆ ಪೂರಕವಾಗಿ ಎಲ್ಲ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ದೃಢೀಕರಣಗೊಂಡ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಅಂಕಪಟ್ಟಿ, ಪ್ರಮಾಣಪತ್ರ ಸೇರಿದಂತೆ ಯಾವುದೇ ದಾಖಲೆ ಹಾಜರುಪಡಿಸಲು ವಿಫಲವಾದವರ ದಾಖಲೆಗಳನ್ನು ಪರಿಶೀಲಿಸದೆ ನೋಂದಣಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗುವುದು. ನಂತರ ಇಂಥವರನ್ನು ಆಪ್ಷನ್ ನಮೂದು ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Wayanad Landslide | ದುರಂತದಲ್ಲಿ ಮಡಿದವರ ಸಂಖ್ಯೆ 5ಕ್ಕೆ ಏರಿಕೆ – ಐವರಿಗಾಗಿ ಮುಂದುವರಿದ ಶೋಧ ಕಾರ್ಯ
