ಪ್ರೀತಿಯ ಕುರಿತಂತೆ ಅರ್ಥಪೂರ್ಣ ಸಂದೇಶ ಸಾರಿರುವ ‘ಕೈ ಜಾರಿದ ಪ್ರೀತಿ’ (kai jarida preeti) ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕಥೆ, ಚಿತ್ರಕಥೆ, ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡುವ ಜತೆಗೆ ಚೈತ್ರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಎರಡನೇ ಬಾರಿ ಪುಷ್ಪ ಭದ್ರಾವತಿ (Pushpa Bhadravati) ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಇವರು ‘ನಾವೆಲ್ಲಾ ಭಾರತೀಯರು’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದರು. ಇವರ ಮಗಳು ಮಂಜುಶ್ರೀ ಶೆಟ್ಟಿ.ಕೆ.ಆರ್ ನಾಯಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ತಂಗಿ ಮಧುಶೆಟ್ಟಿ.ಕೆ.ಆರ್ ಸಹ ನಾಯಕಿಯಾಗಿದ್ದಾರೆ.
ಕಥಾನಾಯಕಿ ಜಿಲ್ಲಾಧಿಕಾರಿ ಹೆಂಡತಿ. ದುರದೃಷ್ಟವಶಾತ್ ಪತಿ ಅಪಘಾತದಿಂದ ಮರಣ ಹೊಂದಿರುತ್ತಾನೆ. ಚಿಕ್ಕ ಮಗುವಿನೊಂದಿಗೆ ಜೀವನ ನಡೆಸಲು ಕೆಲಸಕ್ಕೆ ಹೋಗುತ್ತಿರುತ್ತಾಳೆ. ಅಲ್ಲಿರುವ ಸ್ಥಳೀಯ ನಾಲ್ಕು ಪುಂಡರು ಇವಳ ಹಿಂದೆ ಬೀಳುತ್ತಾರೆ. ಅದರಲ್ಲಿ ಯುವ ಪುಂಡ ಅಂದರೆ ಕಥಾನಾಯಕ ಈಕೆಯ ಕಷ್ಟವನ್ನು ಕಂಡು ಮದುವೆ ಮಾಡಿಕೊಳ್ಳುತ್ತಾನೆ. ಇವನು ಎಷ್ಟು ಪ್ರೀತಿ ಮಾಡುತ್ತಿದ್ದರೂ ಅವಳಿಂದ ಸರಿಯಾದ ಸ್ಪಂದನೆ ಸಿಗುತ್ತಿರುವುದಿಲ್ಲ. ಒಮ್ಮೆ ನಡೆಯಬಾರದ ಘಟನೆ ನಡೆದುಹೋಗುತ್ತದೆ. ಇದರಿಂದ ವಿಚಲಿತನಾಗುವ ಆತ ಯಾರಿಗೆ ಬಾಳು ಕೊಡುತ್ತಾನೆ ಎನ್ನುವುದು ಕ್ಲೈಮಾಕ್ಸ್‌ದಲ್ಲಿ ಸುಂದರವಾಗಿ ಹೇಳಲಾಗಿದೆ. ಇದನ್ನೂ ಓದಿ: ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ
ಚೇತನ್ ಕೃಷ್ಣನ್ (Chetan Krishnan) ಮತ್ತು ಸನತ್ (Sanath) ನಾಯಕರುಗಳು. ಎಸಿಪಿಯಾಗಿ ಹಿರಿಯ ನಟ ಸುಮನ್, ಖಳನಾಗಿ ಡ್ಯಾನಿಕುಟ್ಟಪ್ಪ, ಕೋಟೆ ಪ್ರಭಾಕರ್, ಭುವನ್‌ಗೌಡ ಉಳಿದಂತೆ ನಾಗೇಂದ್ರಅರಸ್, ನಾರಾಯಣಸ್ವಾಮಿ, ಬಾಬುಹಿರಣಯ್ಯ ಐಟಂ ಹಾಡಿಗೆ ಆಶಿತಾ ಹೆಜ್ಜೆ ಹಾಕಿದ್ದಾರೆ. ಆರು ಹಾಡುಗಳ ಪೈಕಿ ಒಂದನ್ನು ಸಂಗೀತ ಸಂಯೋಜಕ ಗಂಧರ್ವ ಬರೆದಿರುತ್ತಾರೆ. ಛಾಯಾಗ್ರಹಣ ಆರ್.ಗಿರಿ, ಸಾಹಸ ಥ್ರಿಲ್ಲರ್‌ಮಂಜು-ಕೌರವವೆಂಕಟೇಶ್, ನೃತ್ಯ ಗಿರಿ ಅಲ್ಲದೆ ಹೊಸ ಪ್ರತಿಭೆಗೆ ಅವಕಾಶ ಮಾಡಿಕೊಡಲಾಗಿದೆ. ತರಿಕೇರೆಯ ಅಮೃತೇಶ್ವರ ದೇವಸ್ಥಾನ, ಚಿಕ್ಕಮಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k