ಬೆಂಗಳೂರು: ಹಾಸನದ ಹಾಲಿ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ರೋಹಿಣಿ ಮನೆಗೆ ಹೋಗಿ ಮಾಹಿತಿ ಕಲೆ ಹಾಕುತ್ತಾರೆ ಎಂಬ ರೇವಣ್ಣ ಅವರ ಆರೋಪಕ್ಕೆ ರೋಹಿಣಿ ಸಿಂಧೂರಿ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ, ನಾನು ಹಾಸನ ಬಿಟ್ಟೆ ಎರಡು ತಿಂಗಳು ಆಗಿದೆ. ರೇವಣ್ಣ ಆರೋಪ ಸತ್ಯಕ್ಕೆ ದೂರವಾಗಿದೆ. ಇದು ರಾಜಕೀಯ ನಾಯಕರು ಚುನಾವಣೆ ಸಮಯದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸಾಮಾನ್ಯವಾಗಿದೆ. ಆರೋಪಕ್ಕೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವ ರೇವಣ್ಣ ಅವರ ಆರೋಪಕ್ಕೆ ಖಡಕ್ ಆಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: SSLCಯಲ್ಲಿ ಹಾಸನ ಜಿಲ್ಲೆ ಫಸ್ಟ್ ಬಂದ ಕಥೆ ಬಿಚ್ಚಿಟ್ಟ ರೋಹಿಣಿ ಸಿಂಧೂರಿ!
Advertisement
Advertisement
ಪ್ರಿಯಾಂಕ ಅವರು ನನ್ನ ಬ್ಯಾಚ್ ಮೇಟ್. ಅವರು ಬ್ಯಾಚ್ ಮೇಟ್ ಆದಾಕ್ಷಣ ನಾನೇನು ಹೇಳಿ ಕೊಡಬೇಕಾಗಿಲ್ಲ. ನಾನು ಬೆಂಗಳೂರಲ್ಲಿ ಇದ್ದೇನೆ. ಎರಡು ತಿಂಗಳಿಂದ ಹಾಸನಕ್ಕೆ ಹೋಗಿಲ್ಲ. ಅಂದ ಮೇಲೆ ನಾನು ಯಾಕೆ ಏನಾದರೂ ಹೇಳಿಕೊಡಲಿ? ಆಕೆಯನ್ನು ನಾನು ಭೇಟಿ ಮಾಡಿಲ್ಲ, ಪ್ರಿಯಾಂಕ ಅವರು ನನ್ನ ಮನೆಗೆ ಬಂದಿಲ್ಲ. ನಾನು ಬೆಂಗಳೂರು, ಆಕೆ ಹಾಸನ, ಹಾಗಿದ್ದಾಗ ಆಕೆಯ ಭೇಟಿ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರೇವಣ್ಣ ಆರೋಪಕ್ಕೆ ತಿರುಗೇಟು ಕೊಟ್ಟ ಹಾಸನ ಡಿಸಿ
Advertisement
ಹಾಸನ ಎರಡು ವರ್ಷದ ಹಿಂದೆ 31 ನೇ ಸ್ಥಾನ ಹೊಂದಿತ್ತು. ನಾನು ಶಿಕ್ಷಣ ವಿಭಾಗದ ಜೊತೆ ಸಾಕಷ್ಟು ಚರ್ಚೆ ಮಾಡಿದ್ದೆ. ನಂತರ ನಾವು ಒಂದು ಕಾರ್ಯಕ್ರಮ ಮಾಡಿಕೊಂಡಿದ್ದೆವು. ಇದರಿಂದ 2017-18ರಲ್ಲಿ 7ನೇ ಸ್ಥಾನಕ್ಕೆ ಬಂದಿತ್ತು. ಕಳೆದ ವರ್ಷ ನಾವು ಶಿಕ್ಷಕರಿಗೆ ಪರೀಕ್ಷೆ ಮಾಡಬೇಕು ಎಂದು ತೀರ್ಮಾನ ಮಾಡಿ ಎರಡು ತಿಂಗಳು ಸಮಯ ಕೊಟ್ಟಿದ್ದೆವು. ಅದು ಸಾಧ್ಯವಾಗಲಿಲ್ಲ, ಆದರೆ ಶಿಕ್ಷಕರು ಪರೀಕ್ಷೆಗೆ ರೆಡಿಯಾಗಿದ್ದರು ಎಂದು ಹೇಳಿದ್ದಾರೆ.
Advertisement
ಪ್ರತಿಯೊಂದು ಪರೀಕ್ಷೆ ಆದ ಮೇಲೆ ತಾಯಿ ಸಭೆ ಎಂದು ಮಾಡುತ್ತಿದ್ದೆವು. ಯಾಕೆಂದರೆ ಮಕ್ಕಳ ಶಿಕ್ಷಣದಲ್ಲಿ ತಾಯಂದಿರ ಪಾತ್ರವೂ ಮುಖ್ಯವಾಗಿದೆ. ಒಂದು ವರ್ಷದಲ್ಲಿ ಹಾಸನವನ್ನು 3ನೇ ಸ್ಥಾನ ಅಥವಾ ಸೆಕೆಂಡ್‍ಗೆ ತರಲೇಬೇಕು. ಇದು ನಿಮಗೆ ಸವಾಲು ಎಂದು ನಾನು ಎಲ್ಲ ಪ್ರಾಂಶುಪಾಲರಿಗೂ ಪತ್ರ ಬರೆದಿದ್ದೆ. ಈಗ ಅವರ ಕಠಿಣ ಪರಿಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಖುಷಿ ಪಟ್ಟರು.
ಎಲ್ಲ ಮಕ್ಕಳನ್ನು ನಿಮ್ಮ ಮಕ್ಕಳು ಎಂದು ಅಂದುಕೊಂಡು ಪಾಠ ಮಾಡಿ. ಮಕ್ಕಳಲ್ಲಿ ಗುಡ್ ಬ್ಯಾಡ್ ಎಂದು ಇರಲ್ಲ. ಒಂದಿಷ್ಟು ವೈಯಕ್ತಿಕವಾಗಿ ಗಮನ ಕೊಡಿ ಸಾಕು. ಎಲ್ಲ ಮಕ್ಕಳಿಗೆ ಪಾಠ ಮಾಡಿದಾಗ ಈ ರೀತಿ ಫಲಿತಾಂಶ ಬರುತ್ತೆ ಎಂದು ನಾನು ಎಲ್ಲ ಶಿಕ್ಷಕರಿಗೆ ಮನವಿ ಮಾಡಿಕೊಂಡಿದ್ದೆ ಎಂದು ತಿಳಿಸಿದರು.