ಅಜರ್ಬೈಜಾನ್‌ ವಿಮಾನ ಪತನದಿಂದ 38 ಸಾವು – ʻದುರಂತʼಕ್ಕೆ ಕ್ಷಮೆ ಕೋರಿದ ಪುಟಿನ್

Public TV
1 Min Read
Vladimir Putin

ಮಾಸ್ಕೋ: ರಷ್ಯಾದ ವಾಯು ಪ್ರದೇಶದಲ್ಲಿ ಅಜರ್ಬೈಜಾನ್‌ ವಿಮಾನ ಪತನಗೊಂಡು (Azerbaijan Plane Crash) 38 ಜನರ ಸಾವಿಗೆ ಕಾರಣವಾದ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕ್ಷಮೆ ಕೋರಿದ್ದಾರೆ. ಅಜರ್ಬೈಜಾನ್‌ ಅಧ್ಯಕ್ಷ ಇಲ್‌ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ (Vladimir Putin’s Apology) ಎಂದು ವರದಿಯಾಗಿದೆ.

Azerbaijan Airlines Plane With Over 60 On Board Crashes Near Aktau City In Kazakhstan Bursts Into Flames

ಕಝಾಕಿಸ್ತಾನದಲ್ಲಿ (Kazakhstan) ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡೋನ್‌ಗಳ (Ukraine Drone) ವಿರುದ್ಧ ರಷ್ಯಾದ ವಾಯುಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ದಕ್ಷಿಣ ರಷ್ಯಾದಿಂದ ಡ್ರೋನ್‌ಗಳನ್ನು ಹಾರಿಸಿದ ಬಳಿಕ ಕಝಾಕಿಸ್ತಾನ್‌ನ ಅಕ್ಟೌ ನಗರದ ಬಳಿಕ ಅಜರ್ಬೈಜಾನ್‌ನ J2-8243 ವಿಮಾನ ಪತನಗೊಂಡಿತು. 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 38 ಮಂದಿ ಸಾವನ್ನಪ್ಪಿದ್ದು, ಉಳಿದ 29 ಮಂದಿ ಗಾಯಗೊಂಡು, ಬದುಕುಳಿದಿದ್ದಾರೆ. ಈ ದುರಂತ ನೆನೆದು ಪುಟಿನ್‌ ಕ್ಷಮೆ ಕೋರಿದರಲ್ಲದೇ ಇದೊಂದು ಘೋರ ದುರಂತ ಎಂದು ಸಹ ಕರೆದಿದ್ದಾರೆ.

ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಕ್ರೆಮ್ಲಿನ್‌ ವರದಿ ಮಾಡಿದೆ.

ವಿಮಾನ ದುರಂತಕ್ಕೂ ಮುನ್ನ ಅಜರ್ಬೈಜಾನ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಗೋಝಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್‌ ನಡೆಸಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್‌ನ ಡೋನ್‌ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು. ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್ಬೈಜಾನ್‌ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.

ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಈ ವಿಮಾನ ಪತನಗೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನೂ ಕೆಲವು, ಉಕ್ರೇನ್ ನಡೆಸಿದ ದಾಳಿಯಿಂದ ದುರಂತ ಸಂಭವಿಸಿದೆ ಎಂದೆನ್ನಲಾಗಿತ್ತು.

Share This Article